More

    ಭಾರತ್ ಪೇ ಮಾಜಿ ವ್ಯವಸ್ಥಾಪಕ ಅಶ್ನೀರ್​ಗೆ ಪೊಲೀಸರಿಂದ ತಡೆ

    ನವದೆಹಲಿ: ‘ಭಾರತ್ ಪೇ’ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಜೈನ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಯಿತು. ಇಬ್ಬರನ್ನೂ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ವಶಕ್ಕೆ ತೆಗೆದುಕೊಂಡಿದೆ. ವಂಚನೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಲುಕ್‌ಔಟ್ ನೋಟಿಸ್​ (ಎಲ್‌ಒಸಿ) ಹೊರಡಿಸಲಾಗಿತ್ತು.

    ಇದನ್ನೂ ಓದಿ: ದೊಡ್ಡ ಬೆದರಿಕೆಗಳಲ್ಲಿ ಒಂದಾಗಿರುವ ಡೀಪ್‌ಫೇಕ್‌ಗಳು: ಪ್ರಧಾನಿ ಮೋದಿ – ಗಾರ್ಬಾ ವೀಡಿಯೊ ಉಲ್ಲೇಖ 
    ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಗುರುವಾರ ತಡರಾತ್ರಿ ಅಶ್ನೀರ್ ಮತ್ತು ಅವರ ಪತ್ನಿ ಮಾಧುರಿ ರಜೆಗಾಗಿ ನ್ಯೂಯಾರ್ಕ್‌ಗೆ ಹೋಗುತ್ತಿದ್ದರು. ಭದ್ರತಾ ತಪಾಸಣೆಗೂ ಮುನ್ನ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಇಒಡಬ್ಲ್ಯು) ಸಿಂಧು ಪಿಳ್ಳೈ ತಿಳಿಸಿದ್ದಾರೆ.

    ದಂಪತಿಯನ್ನು ಬಂಧಿಸಿಲ್ಲ. ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳುವಂತೆ ಮತ್ತು ಮುಂದಿನ ವಾರ ಇಒಡಬ್ಲ್ಯು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗ್ರೋವರ್, ಅವರ ಪತ್ನಿ ಮತ್ತು ಕುಟುಂಬ ಸದಸ್ಯರು 81.28 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಪ್ರೀತಿಸಿ ಮದುವೆಯಾಗೋದಾಗಿ ನಂಬಿಸಿ ಮೋಸ: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ FIR

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts