More

    ವಾಸ್ತವ ಸತ್ಯ ನೆಲೆಯುಳ್ಳ ಕನ್ನಡ ಕಾದಂಬರಿಗಳು : ಎಸ್.ಆರ್. ವಿಜಯಶಂಕರ್ ಅಭಿಮತ

    ಬೆಂಗಳೂರು: ಆಂಗ್ಲ ಸಾಹಿತ್ಯದ ಪ್ರಭಾವದಿಂದ ಕನ್ನಡ ಕಾದಂಬರಿಗಳು ಪುರಾಣದ ಪರಿಕಲ್ಪನೆಗಿಂತ ವಾಸ್ತವ ಸತ್ಯದ ನೆಲೆಯಲ್ಲಿ ಮೂಡಿಬರುತ್ತಿವೆ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ್ ಹೇಳಿದ್ದಾರೆ.

    ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನವು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭರತಕಲ್ಪ’ ಕೃತಿಯ ಲೇಖಕಿ ಡಾ. ಆರ್. ಸುನಂದಮ್ಮಗೆ 2023ರ ಸಾಲಿನ ಅತ್ಯುತ್ತಮ ಕಾದಂಬರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ದೇಶ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದ ಸಂದರ್ಭದಲ್ಲಿ ಕನ್ನಡಕ್ಕೆ ಕಾದಂಬರಿ ಪ್ರಕಾರ ಪ್ರವೇಶಿಸಿತು. ಆಗ ಆಂಗ್ಲ ಸಾಹಿತ್ಯದ ಪ್ರಭಾವ ಹೆಚ್ಚಾಗಿತ್ತು. ಇದು ಕನ್ನಡದ ಮೇಲೂ ಪ್ರಭಾವ ಬೀರಿದ್ದರಿಂದ ವಾಸ್ತವ ಮತ್ತು ಆದರ್ಶದ ನೆಲೆ ಕನ್ನಡದ ಕಾದಂಬರಿಯಲ್ಲಿ ಅಡಕವಾಗಿದೆ ಎಂದು ತಿಳಿಸಿದರು.

    ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಪ್ರಶಸ್ತಿಗಾಗಿ ಬಂದಿದ್ದ 48 ಕಾದಂಬರಿಗಳನ್ನು ಪರಿಶೀಲಿಸಿದ ಸಮಿತಿ 12 ಕೃತಿಗಳನ್ನು ಅಂತಿಮಗೊಳಿಸಿತ್ತು. ಅದರಲ್ಲಿ ಆರ್. ಸುನಂದಮ್ಮ ಅವರ ‘ಭರತಕಲ್ಪ’ ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದರು.
    ಕಾದಂಬರಿಕಾರರಾದ ದ್ವಾರನಕುಂಟೆ ಪಾತಣ್ಣ, ಕಾ.ತ. ಚಿಕ್ಕಣ್ಣ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ, ಕಾದಂಬರಿಕಾರ್ತಿ ಡಾ. ಲತಾ ಗುತ್ತಿ, ಮಾಜಿ ಶಾಸಕ ಎಚ್.ಎಂ. ರೇವಣ್ಣ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts