More

    ಸುಭದ್ರ ಭಾರತಕ್ಕೆ ಬಿಜೆಪಿ: ಭರತ್​ ಬೊಮ್ಮಾಯಿ

    ಗದಗ: ರಾಜ್ಯದ ಸಿಎಂ ಆಗಿ ರಾಜ್ಯವನ್ನು ಪ್ರಗತಿ ಮಾಡುವ ಮೂಲಕ ರಾಜ್ಯಕ್ಕೆ ಸಮರ್ಥ ಆಡಳಿತವನ್ನು ನಮ್ಮ ತಂದೆ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಮೋದಿ ಅವರ ಅಪೇೆಯಂತೆಯೇ ದೇಶ ಸೇವೆಗಾಗಿ ಲೋಕಸಭಾ ಚುನಾವಣೆಗೆ ಸ್ಪಧಿರ್ಸಿದ್ದಾರೆ. ಮೋದಿ ಕಂಡ ನವ ಮತ್ತು ವಿಕಸಿತ ಭಾರಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನ ಅತ್ಯಂತ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿ ಸರ್ಕಾರ ರಚಿಸೋಣ ಎಂದು ಭರತ್​ ಬೊಮ್ಮಾಯಿ ಹೇಳಿದರು.
    ಗದಗ ಬೆಟಗೇರಿ ಅವಳಿ ನಗರದಲ್ಲಿ ಲೋಕಸಭಾ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ನಿಮಿತ್ಯ ನಗರದ ವಿವಿಧ ಮುಖಂಡರು ಮತ್ತು ಕಾರ್ಯಕರ್ತರ ಮನೆಗೆ ಭೇಟಿ ನೀಡಿ, ಖಾಸಗಿ ಹೊಟೆಲ್​ ನಲ್ಲಿ ಉದ್ಯಮಿಗಳ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ದೇಶದ ವಿಕಸನ ಮತ್ತು ವಿಶ್ವದಲ್ಲಿ ಭಾರತ ದೇಶ ಪ್ರಬಲ ಮಾಡುವ ಉದ್ದೇಶಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಜನನವಾಗಿದೆ. ದೇಶದಲ್ಲಿ ಮತ್ತೋಮ್ಮೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಮೋದಿ ಕೈ ಬಲಪಡಿಸುವ ಉದ್ದೇಶದಿಂದ ಜನರು ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ. ಕಳೆದ 10 ವರ್ಷಗಳಿಂದ ಮೋದಿ ಅವರು ಅಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ವಿಶ್ವದಲ್ಲೇ ಬಲಿಷ್ಠ ದೇಶವಾಗಿ ಭಾರತ ಹೊರಮ್ಮಿದೆ. ಸರ್ವ ಧರ್ಮ ಮತ್ತು ಸರ್ವ ಜನಾಂಗದವರ ಪ್ರಗತಿ ಬಯಸಿ ಸಮರ್ಥ ಆಡಳಿತವನ್ನು ನೀಡಿದ್ದಾರೆ. ಜನ್​ ಧನ್​ ಯೋಜನೆ, ಸ್ಕಿಲ್​ ಇಂಡಿಯಾ ಮಿಷನ್​, ಮೇಕ ಇನ್​ ಇಂಡಿಯಾ, ಮಿಷನ್​ ಸ್ವಚ್ಚ ಭಾರತ, ಸಂಸದ ಆದರ್ಶ ಗ್ರಾಮ ಯೋಜನೆ, ಶ್ರಮೇವ್​ ಜಯತೆ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಹೃದಯ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಉಜ್ವಲ್​ ಯೋಜನೆ, ಸುರಾ ಭಿಮಾ ಯೋಜನೆ, ಪಿಂಚಣಿ ಯೋಜನೆ, ಜೀವನ ಜ್ಯೋತಿ ಬಿಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬಡ ಜನರ ಆಶಾ ಕಿರಣವಾಗಿ ಮೋದಿ ಹೊರಮ್ಮಿದ್ದಾರೆ ಎಂದರು.
    ಅಖಿಲ ಕರ್ನಾಟಕ ಮೋಚಿಗಾರ ಸಂದ ರಾಜ್ಯಾಧ್ಯ ಶಿವಪ್ಪ ಮುಳಗುಂದ ಮಾತನಾಡಿ, ಕೇಂದ್ರ ಸರ್ಕಾರ 26 ಕ್ಕೂ ಅಧಿಕ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಭಾರತ ದೇಶವನ್ನು ವಿಶ್ವದಲ್ಲೇ ಸರ್ವ ರಂಗದಲ್ಲೂ ಬಲಿಷ್ಠಗೊಳಿಸುವ ಮೂಲಕ ದೇಶಕ್ಕೆ ವಿಶ್ವಮಟ್ಟದ ಸ್ಥಾನಮಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿದ್ದಾರೆ. ಭಾರತೀಯ ಜನತಾ ಪ ಈ ಬಾರಿ 400 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ಹಿನ್ನಲೆಯಲ್ಲಿ ಭಾರತ ದೇಶದ ಪ್ರತಿಯೊಬ್ಬ ನಾಗರಿಕನೂ ಭಾರತೀಯ ಜನತಾ ಪಕ್ಕೆ ಮತ ಚಲಾಯಿಸುವ ಮೂಲಕ ಭಾರತ ದೇಶದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರು ತಮ್ಮ ಪಾಲಿನ ಪಾತ್ರವನ್ನ ನಿರ್ವಹಿಸಬೇಕು ಎಮದು ಶಿವಪ್ಪ ಮುಳಗುಂದ ಕರೆ ನೀಡಿದರು.
    ಶಂಕರ ಕಾಕಿ, ದಶರಥ ಕೊಳ್ಳಿ, ಅನೀಲ ಗಡ್ಡಿ, ಬಸವಂತಪ್ಪ ಕರ್ಜಗಿ, ಅಶೋಕ ಮುಳಗುಂದ, ಬೂದಪ್ಪ ಹುಣಶೀಮರದ, ಲಕ್ಷ$್ಮಣ ಮುಳಗುಂದ, ಶಂಕರ ಮುಳಗುಂದ, ಬಸವರಾಜ ಗಾರವಾಡ, ಚಿದಾನಂದ ಹೊಸಮನಿ, ಶಿವು ಹಿರೇಮನಿಪಾಟೀಲ್​, ಸುದೀರ ಕಾಟಿಗರ ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts