More

    ಭಾರತ​ ಬಂದ್​| ರಾಜ್ಯ ರಾಜಧಾನಿಯಲ್ಲಿ ಎಂದಿನಂತೆ ಬಸ್​ ಸಂಚಾರ ಆರಂಭ: ಪ್ರತಿನಿತ್ಯದ ಚಟುವಟಿಕೆ ಆರಂಭಿಸಿದ ಜನರು

    ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಖಂಡಿಸಿ ದೇಶವ್ಯಾಪಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಭಾರತ್​ ಬಂದ್​ಗೆ ಕರೆ ಕೊಟ್ಟಿವೆಯಾದರೂ ರಾಜ್ಯ ರಾಜಧಾನಿಯಲ್ಲಿ ಮಾಮೂಲಿ ದಿನಗಳಂತೆ ಬಸ್​ ಸಂಚಾರ ಆರಂಭವಾಗಿದ್ದು, ಜನರು ತಮ್ಮ ಪ್ರತಿನಿತ್ಯದ ಚಟುವಟಿಕೆಗಳ ಕಡೆ ಗಮನಹರಿಸಿದ್ದಾರೆ.

    ಭಾರತ್ ಬಂದ್​ಗೆ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬೆಂಬಲ ನೀಡಿದಿರುವುದರಿಂದ ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದಿನಂತಿದೆ. ಈಗಾಗಲೇ ರಸ್ತೆಗೆ ಇಳಿದಿರುವ ಬಸ್​ಗಳಲ್ಲಿ ಎಂದಿನಂತೆಯೇ ಪ್ರಯಾಣಿಕರ ಸಂಖ್ಯೆ ಕಾಣುತ್ತಿದೆ.

    ಇನ್ನು ಬಸ್ ನಿಲ್ದಾಣದ ಆಸು-ಪಾಸಿನ ಎಲ್ಲಾ ಅಂಗಡಿ-ಮುಂಗಟ್ಟುಗಳು ಕೂಡ ತೆರೆದಿವೆ. ದಿನನಿತ್ಯ ಕಾರ್ಯ ನಿರ್ವಹಿಸುವ ಆಟೋ ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಕೂಡ ಲಭ್ಯವಿದೆ.

    ಪರಿಸ್ಥಿತಿ ಆರಂಭದಲ್ಲಿ ಸಹಜವಾಗಿದ್ದರೂ ಮುಂಜಾಗ್ರತ ಕ್ರಮವಾಗಿ ಮೆಜೆಸ್ಟಿಕ್ ಸುತ್ತ-ಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದ್ರೆ ಕ್ರಮಕೈಗೊಳ್ಳಾಗುತ್ತದೆ.

    ಕೆ.ಆರ್​. ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಆರಂಭ
    ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿಯೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇನ್ನು ಕೆ.ಆರ್​. ಮಾರ್ಕೆಟ್​ ಬಳಿಯು ಎಂದಿನಂತೆ ಬಸ್ ಸಂಚಾರವಿದೆ. ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಆಟೋಗಳು ಕೂಡ ಎಂದಿನಂತೆ ಕಾರ್ಯನಿರ್ವಹಣೆ ಮಾಡುತ್ತಿವೆ. ವ್ಯಾಪಾರ-ವಹಿವಾಟು ಆರಂಭವಾಗಿದ್ದು, ಬೆಳಿಗ್ಗೆ 3 ಗಂಟೆಯಿಂದ ವ್ಯಾಪಾರ ಸರಾಗವಾಗಿ ಸಾಗಿದೆ. ಬೆಳಿಗ್ಗೆಯಿಂದಲೇ ತರಕಾರಿ, ಹೂ-ಹಣ್ಣು ಖರೀದಿಯಲ್ಲಿ ಜನ ತೊಡಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts