More

    ಜಂತು ಮಾತ್ರೆ ತರಲಿದೆ ಪೌಷ್ಟಿಕತೆ

    ಭರಮಸಾಗರ: ಜಂತು ನಿವಾರಣೆ ಮಾತ್ರೆ ಕೊಡಿಸಿ ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಿ ಎಂದು ತಾಪಂ ಸದಸ್ಯ ಎನ್.ಕಲ್ಲೇಶ್ ಪಾಲಕರು, ಶಿಕ್ಷಕರಲ್ಲಿ ಮನವಿ ಮಾಡಿದರು.

    ಇಲ್ಲಿನ ಸರ್ಕಾರಿ ಮಾದರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಜಂತುಹುಳು ನಿವಾರಣಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

    ಮುಖ್ಯಶಿಕ್ಷಕ ಮಹೇಶ್ ಮಾತನಾಡಿ, ಶಾಲೆ, ಅಂಗನವಾಡಿ ಕೇಂದ್ರದಲ್ಲಿ ಜಂತುಹುಳು ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇವು ಮಕ್ಕಳಲ್ಲಿನ ರಕ್ತಹೀನತೆ, ಅಪೌಷ್ಟಿಕತೆ ನಿವಾರಣೆ, ನಿಶ್ಯಕ್ತಿ, ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದನ್ನು ತಡೆಗಟ್ಟಲು ಅವಶ್ಯಕ. ಕಡ್ಡಾಯವಾಗಿ ಎಲ್ಲ ಮಕ್ಕಳಿಗೂ ಮಾತ್ರೆ ಕೊಡಿಸುವ ಕೆಲಸ ಪಾಲಕರು ಮತ್ತು ಶಿಕ್ಷಕರಿಂದಾಗಬೇಕು ಎಂದರು.

    ಶಾಲೆಯಿಂದ ಆರಂಭಗೊಂಡ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಂತು ನಿವಾರಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

    ಹಿರಿಯ ಆರೋಗ್ಯ ಸಹಾಯಕ ಆಂಜನೇಯ, ಆರೋಗ್ಯ ನಿರೀಕ್ಷಕರಾದ ಕೆಂಚಪ್ಪ, ವಿನಯ್ ಸಿಂಧೆ, ಸಹಾಯಕರಾದ ರಝಿಯಾ, ಆಶಾ, ಶಿಕ್ಷಕರಾದ ಮುಬಾರಕ್, ಜಗನ್ನಾಥ್, ಜಾಹ್ನವಿ, ಕರಿಬಸಪ್ಪ, ಆಶಾ ಕಾರ್ಯಕರ್ತೆಯರು, ಶಾಲಾ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts