More

    ಗುಂಪು ಸೇರದೆ ಅಂತರ ಕಾಯ್ದುಕೊಳ್ಳಿ

    ಭರಮಸಾಗರ: ಶುಚಿತ್ವದ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕರೊನಾ ವೈರಸ್ ಹರಡುವುದನ್ನು ತಡೆಯಬಹುದು ಎಂದು ಪಿಡಿಒ ಶ್ರೀದೇವಿ ಹೇಳಿದರು.

    ಗ್ರಾಪಂ ಆವರಣದಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಕರೊನಾ ವೈರಸ್ ಜನಜಾಗೃತಿ ಅಭಿಯಾನ ಮತ್ತು ವೈರಸ್ ತಡೆ ಮುಂಜಾಗ್ರತಾ ಕ್ರಮ ಕುರಿತು ಸಭೆಯಲ್ಲಿ ಮಾತನಾಡಿ, ಬ್ಯಾಂಕ್, ನ್ಯಾಯಬೆಲೆ ಅಂಗಡಿ ಇನ್ನಿತರ ಜನನಿಬಿಡ ಪ್ರದೇಶದಲ್ಲಿ ಕ್ರಿಮಿನಾಶಕ ಸಿಂಪಡಿಸಲಾಗುವುದು ಎಂದು ತಿಳಿಸಿದರು.

    ಹಿರಿಯ ಆರೋಗ್ಯ ಸಹಾಯಕ ಆಂಜನೇಯ ಮಾತನಾಡಿ, ಹೋಬಳಿಯಾದ್ಯಂತ ಸಂಚರಿಸಿ ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳನ್ನು ಬೆಳಗ್ಗೆ 7 ರಿಂದ 10 ಮತ್ತು ಸಂಜೆ 4 ರಿಂದ 7 ಗಂಟೆ ವರೆಗೆ ಮಾತ್ರ ತೆರೆಯಲು ನಿರ್ಧರಿಸಲಾಯಿತು.

    ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಸಿ.ಟಿ. ಮಹಾಂತೇಶ್, ತಾಪಂ ಸದಸ್ಯ ಕಲ್ಲೇಶ್, ಲೋಕ ಶಿಕ್ಷಣ ಕೇಂದ್ರದ ಪ್ರೇರಕಿ ಲೋಲಾಕ್ಷಮ್ಮ, ಓಂಕಾರಪ್ಪ, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts