More

    ಅಖಂಡ ರಾಷ್ಟ್ರನಿರ್ಮಾಣದಲ್ಲಿ ಪಟೇಲ್ ಕೊಡುಗೆ ಅಪಾರ

    ಭಾಲ್ಕಿ: ಅಖಂಡ ರಾಷ್ಟ್ರ ನಿರ್ಮಾಣದಲ್ಲಿ ಕೇಂದ್ರದ ಮಾಜಿ ಗೃಹ ಮಂತ್ರಿಯಾಗಿದ್ದ ದಿ.ಸರ್ದಾರ್ ವಲ್ಲಭಭಾಯಿ ಪಟೇಲ್ ಕೊಡುಗೆ ಅಪಾರ ಎಂದು ಸ್ವತಂತ್ರ ಸೇನಾನಿ ಹೀರಾಚಂದ ವಾಘಮಾರೆ ಹೇಳಿದರು.

    ಪಟ್ಟಣದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪಟೇಲ್ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅಖಂಡ ಭಾರತ ನಿರ್ಮಾಣಕ್ಕೆ ಪಟೇಲ್ ಪಟ್ಟ ಶ್ರಮ ವರ್ಣನಾತೀತವಾಗಿದೆ. ಶಾಮ, ದಾಮ, ದಂಡ ನಿಯಮಾನುಸಾರ ದೇಶದ ೫೬೨ ರಾಜಪ್ರಭುತ್ವ ಪ್ರಾಂತ್ಯಗಳನ್ನು ಒಂದುಗೂಡಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.

    ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಓಂಪ್ರಕಾಶ ರೊಟ್ಟೆ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ, ಬಸವದಳದ ಗುಂಡಪ್ಪ ಸಂಗಮಕರ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಮಾತನಾಡಿದರು.

    ಪ್ರಮುಖರಾದ ಶಿವಕುಮಾರ ನಾರಾ, ಜೈಪ್ರಕಾಶ ಕುಂಬಾರ, ಶಿವಕುಮಾರ ಘಂಟೆ, ನಾಗಶೆಟ್ಟೆಪ್ಪ ಲಂಜವಾಡೆ, ಬಾಬುರಾವ ಧೂಪೆ, ಎಸ್.ಎಸ್. ಮೈನಾಳೆ, ಸಂತೋಷ ಬಿಜಿ ಪಾಟೀಲ್, ಕಲ್ಲಪ್ಪ ದಾನಾ ಖೇಡ, ಎಂ.ಪಿ. ರಾಠೋಡ್, ಸಂತೋಷ ಹಡಪದ, ಶಿವಾನಂದ ಗುಂದಗಿ, ಜಯರಾಜ ದಾಬಶೆಟ್ಟಿ ಇತರರಿದ್ದರು. ಶಿವಾನಂದ ಜಯರಾಜ ಸ್ವಾಗತಿಸಿದರು. ಮಹೇಶ ವಾರದ ನಿರೂಪಣೆ ಮಾಡಿದರು. ಶಿವಪುತ್ರ ದಾಬಶೆಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts