More

    ಭಗೀರಥ ಜನಕಲ್ಯಾಣ ರಥಯಾತ್ರೆಗೆ ಭವ್ಯ ಸ್ವಾಗತ

    ಸವದತ್ತಿ: ಸಮೀಪದ ಸುಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ತಾಲೂಕು ಭಗೀರಥ ಉಪ್ಪಾರ ಸಮುದಾಯದವರಿಂದ ಭಾರತ ಭಗೀರಥ ಜನಕಲ್ಯಾಣ ರಥ ಯಾತ್ರೆಗೆ ಶನಿವಾರ ಭವ್ಯ ಸ್ವಾಗತಕೋರಲಾಯಿತು.

    ದೇವಿಯ ದರ್ಶನ ಪಡೆದ ಭಗೀರಥ ಪೀಠದ ಜಗದ್ಗುರು ಡಾ.ಪುರಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, ಭಗೀರಥ ಉಪ್ಪಾರ ಸಮುದಾಯಕ್ಕೆ ಭವ್ಯ ಇತಿಹಾಸವಿದೆ. ದೇಶದಾದ್ಯಂತ 15-20ಕೋಟಿ ಜನಸಂಖ್ಯೆ ಹೊಂದಿರುವ ಈ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪಜಾ/ಪಪಂ ಸೇರಿಸಬೇಕಾಗಿದೆ. ಸರ್ಕಾರ ಸಮುದಾಯಕ್ಕೆ ಅಗತ್ಯವಿರುವ ಮೀಸಲಾತಿ ನೀಡಿ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.

    ಸಮುದಾಯದ ಮುಖಂಡ ಬಸವರಾಜ ಆಯಟ್ಟಿ ಮಾತನಾಡಿ, ಸಮುದಾಯದ ಅಭಿವದ್ಧಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಮೀಸಲಾತಿ ಅವಶ್ಯವಿದೆ. ಒಗ್ಗಟ್ಟಾಗಿ ಹೊರಾಟ ಮಾಡಿದರೆ ಮಾತ್ರ ಸಮುದಾಯ ಮುಂದೆ ಬರಲು ಸಾಧ್ಯ ಎಂದರು. ವಿವಿಧ ರಾಜ್ಯಗಳಿಂದ ಯಾತ್ರೆಯಲ್ಲಿ ಆಗಮಿಸಿದವರಿಗೆ ಸನ್ಮಾನ ಮಾಡಲಾಯಿತು.

    ಶಾಸಕ ವಿಶ್ವಾಸ ವೈದ್ಯ ಅವರು ಶ್ರೀಗಳಿಗೆ ಸನ್ಮಾನಿಸಿದರು, ಸಮುದಾಯದ ವತಿಯಿಂದ ಶಾಸಕರನ್ನು ಸನ್ಮಾನ ಮಾಡಲಾಯಿತು.

    ರಾಜ್ಯ ಕಾರ್ಯದರ್ಶಿ ಬನಪ್ಪ ಹುಲಿಬೆಟ್, ಕವಿತಾ ರಾಜೇಶ, ಮುಖಂಡರಾದ ಬಸಪ್ಪ ಪಟ್ಟಣ, ಮಲ್ಲಿಕಾರ್ಜುನ ಕತ್ತಿ, ಗೋವಿಂದ ಕಿತ್ತೂರ, ನಾಗೇಶ ಕಿತ್ತೂರ, ರಾಜು ಪಟ್ಟಣ, ನಾಗಪ್ಪ ಕಡಕೋಳ,ಮಾರುತಿ ಮುನವಳ್ಳಿ, ಹನುಮಂತ ಅರಬಾವಿ, ಭೀಮಶಿ ಗೂದಿಗೊಪ್ಪ, ರಾಜು ಹರಳಕಟ್ಟಿ, ಭೀಮಶಿ ಉಪ್ಪಾರ, ದೇವೇಂದ್ರಪ್ಪ ಕಲ್ಲಕುಟ್ರಿ, ನಾಗೇಶ ಅರ್ಟಗಲ್, ಉಮೇಶ ಹೊಳೆಗಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts