ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ! ವಿಶೇಷತೆಯನ್ನೇ ಹೊತ್ತೊಯ್ಯಲಿದೆ ಈ ಉಪಗ್ರಹ

blank

ನವದೆಹಲಿ: ಪ್ರತಿ ಬಾರಿ ರಾಕೆಟ್​ಗಳು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುತ್ತವೆ. ಆದರೆ ಈ ಬಾರಿ ವಿಶೇಷವೆಂದರೆ ಉಪಗ್ರಹವೊಂದರಲ್ಲಿ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಗೂ 25 ಸಾವಿರ ಮಂದಿಯ ಹೆಸರು ಬಾಹ್ಯಾಕಾಶಕ್ಕೆ ನೆಗೆಯಲಿದೆ.

ಈ ತಿಂಗಳಾಂತ್ಯದಲ್ಲಿ ಇಸ್ರೋದಿಂದ ಉಡಾವಣೆಯಾಗಲಿರುವ ಭಾರತೀಯ ಉಪಗ್ರಹ ಸತೀಶ್​ ಧವನ್​ ಉಪಗ್ರಹದಲ್ಲಿ ಈ ವಿಶೇಷತೆಗಳನ್ನು ಕಳುಹಿಸಿಕೊಡಲು ಉಪಗ್ರಹ​ ನಿರ್ಮಿಸಿರುವ ಸ್ಟಾರ್ಟ್​ ಅಪ್​ ಸಂಸ್ಥೆ ನಿರ್ಧರಿಸಿದೆ. ಈ ಉಪಗ್ರಹವನ್ನು ಪಿಎಸ್​ಎಲ್​ವಿ ರಾಕೆಟ್​ ನಭಕ್ಕೆ ಹೊತ್ತೊಯ್ಯಲಿದೆ. ಅದರ ಜತೆಯಲ್ಲಿ ಮೂರು ಪ್ಲೇಲೋಡ್​ಗಳೂ ಉಪಗ್ರಹದಲ್ಲಿರಲಿದೆ. ಬಾಹ್ಯಾಕಶ ವಿಕಿರಣವನ್ನು ಅಧ್ಯಯನ ಮಾಡಲು, ಮ್ಯಾಗ್ನೆಟೋಸ್ಪಿಯರ್ ಅಧ್ಯಯನ ನಮಡೆಸಲು ಮತ್ತು ಕಡಿಮೆ-ಶಕ್ತಿಯ ವಿಶಾಲ-ಪ್ರದೇಶ ಸಂವಹನ ಜಾಲವನ್ನು ಪ್ರದರ್ಶಿಸುವ ಪ್ಲೇಲೋಡ್​ ಇದರಲ್ಲಿರಲಿದೆ.

ಸತೀಶ್​ ಧವನ್​ ಉಪಗ್ರಹ (ಎಸ್​ಡಿ ಸೆಟೆಲೈಟ್​)ವನ್ನು ಸ್ಪೇಸ್​ಕಿಡ್ಸ್​ ಇಂಡಿಯಾ ಸ್ಟಾರ್ಟ್​ಅಪ್​ ಸಂಸ್ಥೆ ತಯಾರಿಸಿದೆ. ಈ ಹಿಂದೆ ಬೈಬಲ್​ನಂತಹ ಧರ್ಮಗ್ರಂಥಗಳು ನಭಕ್ಕೆ ಹೋಗಿದ್ದ ವಿಚಾರ ಅರಿತಿದ್ದ ಸಂಸ್ಥೆ ಅದೇ ಕಾರಣದಿಂದಾಗಿ ಭಗವದ್ಗೀತೆಯನ್ನು ಕಳುಹಿಸಿಕೊಡುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹಿ, ಭಾವಚಿತ್ರವನ್ನು ಕಳುಹಿಸಲಾಗುತ್ತಿದೆ. ಅದರ ಜತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಮಹೇಶ್ವರನ್ ಅವರ ಹೆಸರನ್ನು ಕೆಳಗಿನ ಫಲಕದಲ್ಲಿ ಕೆತ್ತಲಾಗಿದೆ.

ಬಾಹ್ಯಾಕಾಶಕ್ಕೆ ಕಳುಹಿಸುವುದಕ್ಕೆ ಹೆಸರನ್ನು ಕೇಳಿದ್ದೆವು. ಒಂದೇ ವಾರದಲ್ಲಿ ಸುಮಾರು 25 ಸಾವಿರ ಹೆಸರು ಬಂದಿದೆ. ಚೆನ್ನೈನ ಒಂದು ಶಾಲೆಯವರು ಶಾಲೆಯ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿಕೊಟ್ಟಿದ್ದಾರೆ. ಈ 25 ಸಾವಿರ ಹೆಸರನ್ನು ನಾವು ಬಾಹ್ಯಾಕಾಶಕ್ಕೆ ಕಳುಹಿಸಲಿದ್ದೇವೆ. ಜನರಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಿಸಬೇಕೆಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪೇಸ್​ಕಿಡ್ಸ್​ ಇಂಡಿಯಾ ಸಂಸ್ಥೆಯ ಸ್ಥಾಪಕಿ ಮತ್ತು ಸಿಇಒ ಡಾ.ಶ್ರೀಮತಿ ಕೇಸನ್ ಹೇಳಿದ್ದಾರೆ. (ಏಜೆನ್ಸೀಸ್​)

ಭಾಷಣ ಮಾಡುತ್ತಲೇ ಕುಸಿದು ಬಿದ್ದ ಗುಜರಾತ್​ ಸಿಎಂ! ಆರೋಗ್ಯ ಸ್ಥಿರವಾಗಿದೆ ಎಂದ ವೈದ್ಯರು

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

Share This Article

Clay Pots : ಹೊಸ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಈ 3 ವಿಷಯಗಳನ್ನು ನೆನಪಿನಲ್ಲಿಡಿ

Clay Pots : ಈಗ ಸ್ಟೀಲ್, ಕಬ್ಬಿಣ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ.…

Hair care : ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

Hair care : ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ…

ಗೀಸರ್​​ ಉಪಯೋಗಿಸುವವರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ! ತಪ್ಪಿದರೆ ನಿಮ್ಮ ಜೀವವೇ ಹೋದಿತು

ಬೆಂಗಳೂರು: ಈಗ ಚಳಿಗಾಲ. ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಒಂದರ ಮೇಲೊಂದು ಬಟ್ಟೆಯನ್ನು ಧರಿಸಿ, ಬೆಚ್ಚಗಿರುವ ಜನರು,…