More

    ಅಂಬೇಡ್ಕರ್ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿ

    ಭದ್ರಾವತಿ: ನಗರದ ಬಿ.ಎಚ್.ರಸ್ತೆ ಅಂಡರ್​ಬ್ರಿಡ್ಜ್ ಬಳಿಯ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೊಸದಾಗಿ 11 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    2004ರಲ್ಲಿ ಅಂಡರ್​ಬ್ರಿಡ್ಜ್ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ನಗರಸಭೆ ಹಾಗೂ ತಾಲೂಕು ಆಡಳಿತದಿಂದ ನಾಮಕರಣ ಮಾಡಲಾಗಿತ್ತು. 2006ರಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅದೇ ವೃತ್ತದಲ್ಲಿ 6 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. 2007ರಲ್ಲಿ ಅಂದಿನ ಡಿಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಮೆ ಅನಾವರಣಗೊಳಿಸಿದ್ದರು.

    ಆನಂತರ 6 ಅಡಿ ಎತ್ತರದ ಬದಲಾಗಿ 11 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆಗೆ ಒತ್ತಾಯಿಸಿ ಡಿಎಸ್​ಎಸ್ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಪ್ರತಿಮೆ ಬದಲಾವಣೆಗೆ ನಗರಸಭೆ 25 ಲಕ್ಷ ರೂ. ಅನುದಾನ ಮೀಸಲಿಟ್ಟಿತ್ತು. 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಆಗಿದ್ದ ವಿ.ಪಿ.ಹಿಕ್ಕೇರಿ ಅಂಬೇಡ್ಕರ್ ವೃತ್ತದ ಅಭಿವೃದ್ಧಿಯೊಂದಿಗೆ ಪ್ರತಿಮೆ ಬದಲಾವಣೆಗೆ ಹೆಚ್ಚುವರಿಯಾಗಿ 10 ಲಕ್ಷ ರೂ. ಮೀಸಲಿರಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದರು.

    ಇದೀಗ ನಗರದ ಅಭಿವೃದ್ಧಿಗೆ ಮುಂದಾಗಿರುವ ನಗರಸಭೆ, ಬಿ.ಎಚ್.ರಸ್ತೆ ವಿಸ್ತರಿಸುತ್ತಿದ್ದು ಅಂಬೇಡ್ಕರ್ ವೃತ್ತವನ್ನೂ ವಿಸ್ತರಿಸುತ್ತಿದೆ. ಅಂಬೇಡ್ಕರ್ ಪ್ರತಿಮೆಯನ್ನು ವೃತ್ತದ ಮಧ್ಯಭಾಗದಲ್ಲಿ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದು 35 ಲಕ್ಷ ರೂ. ಬದಲಾಗಿ 50 ಲಕ್ಷ ರೂ. ವೆಚ್ಚದಲ್ಲಿ 11 ಅಡಿ ಎತ್ತರದ ಹೊಸ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಸಿದ ಶಾಸಕ ಸಂಗಮೇಶ್ವರ್, ನೂತನ ಪ್ರತಿಮೆ ನಿರ್ವಣಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಗ್ರೇಡ್ 2 ತಹಸೀಲ್ದಾರ್ ರಂಗಮ್ಮ, ಪೌರಾಯುಕ್ತ ಮನೋಹರ್, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಡಿಎಸ್​ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಮುಖಂಡರಾದ ಡಿ.ರಾಜು, ಕೆ.ರಂಗನಾಥ್, ಶಾಂತಿ, ಕಾಣಿಕ್​ರಾಜ್, ಮಣಿ, ಕೆ.ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts