More

    ಸಾಹಿತ್ಯ ಓದುವ ಅಭಿರುಚಿ ಬೆಳಿಸಿಕೊಳ್ಳಿ

    ಬಾಗಲಕೋಟೆ: ಮಕ್ಕಳು ಪಠ್ಯದ ಜೊತೆಗೆ ಪೂರಕವಾಗಿ ಸಾಹಿತ್ಯ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಭವಿಷ್ಯದ ಬದುಕು ಸುಂದರವಾಗುತ್ತದೆ. ಹೀಗಾಗಿ ಮಕ್ಕಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.
    ನವನಗರದ ಕಸಾಪ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ ಸರಣಿ-೬ ರಲ್ಲಿ ಉತ್ತರಕನ್ನಡ ಜಿಲ್ಲೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಕುರಿತಾದ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಇಂಗ್ಲಿಷ್, ಕನ್ನಡ ಭಾಷೆಯಲ್ಲಿ ಸಾಹಿತ್ಯ ಓದಿದವಳು. ಬಾಲ್ಯದಿಂದ ಓದುವ ಗೀಳು ಇತ್ತು. ಕತೆ, ನಾಟಕ, ಕವಿತೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಓದುತ್ತಿದ್ದೆ. ಈ ಹುದ್ದೆಗೆ ಬರುವುದಕ್ಕಿಂತ ಮೊದಲು ಎಸ್.ಎಲ್.ಭೈರಪ್ಪ, ಕುವೆಂಪು ವಿವಿಧ ಸಾಹಿತಿಗಳ ಸಾಹಿತ್ಯ ಓದುವ ಹವ್ಯಾಸವಿತ್ತು. ಸದ್ಯ ಕೆಲಸದ ಒತ್ತಡದಲ್ಲಿ ಕಡಿಮೆಯಾಗಿದೆ. ಸಾಹಿತ್ಯ ಓದುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದರು.
    ತಿಂಗಳ ಅತಿಥಿಗಳಾಗಿ ತಮ್ಮಣ್ಣ ಬೀಗಾರ ಮಾತನಾಡಿ, ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ. ಲೇಖಕರ ಎದುರಲ್ಲಿ ಅವರ ಸಾಹಿತ್ಯ ಕುರಿತು ಅವಲೋಕನ ಮಾಡುತ್ತಿರುವ ರಾಜ್ಯಕ್ಕೆ ಮಾದರಿ. ಮಕ್ಕಳ ಸಾಹಿತ್ಯ ಆಸಕ್ತಿ ಇದ್ದ ಕಾರಣ. ಮುಂದು ವರೆಸಿದ್ದೇನೆ. ೨೮ ಮಕ್ಕಳ ಕೃತಿ ರಚಸಿದ್ದೇನೆ. ಮಕ್ಕಳ ಮನಸ್ಸು ಅರಳಿಸುವ, ಅವರ ಭವಿಷ್ಯ ರೂಪಿಸುವುದು ನನ್ನ ಅಕ್ಷರ ಕೃಷಿ ಉದ್ದೇಶ ಎಂದು ಹೇಳಿದರು.
    ಈ ಸಂದರ್ಭದಲ್ಲಿ ತಮ್ಮಣ್ಣ ಬೇಗಾರ ಸಾಹಿತ್ಯ ಓದಿದ ಮಕ್ಕಳು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಮಕ್ಕಳ ಸಾಹಿತಿ ಸೋಮಲಿಂಗ ಬೇಡರ ಬಿಟಿಡಿಎ ಪ್ರಾಥಮಿಕ ಶಾಲಾ ಮಕ್ಕಳು ಅವರೊಂದಿಗೆ ಸಾಹಿತ್ಯ ಸಂವಾದ ಮಾಡಿದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಶಂಕರ ಮುತ್ತಗಿ ಸಾಹಿತ್ಯಾವಲೋಕನ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ಬಿಟಿಡಿಎ ಶಾಲೆಯ ಮುಖ್ಯ ಗುರು ಶರಣಪ್ಪ ಬೇವೂರ, ಕಸಾಪ ತಾಲೂಕ ಕೋಶಾಧ್ಯಕ್ಷ ಬಸಲಿಂಗಯ್ಯ ಮಠಪತಿ, ಗೌರವ ಕಾರ್ಯದರ್ಶಿ ಶಂಕರ ಹೂಗಾರ, ಸಂಗಮೇಶ ಬಡಿಗೇರ, ಅನಿಲ್ ಗುನ್ನಾಪುರ, ಸಂಘಟನಾ ಕಾರ್ಯದರ್ಶಿ ಮುತ್ತು ಬಳ್ಳಾ ಇತರರು ಇದ್ದರು. ಅಜಯ ಕೋರಿಶೆಟ್ಟರ ಪ್ರಾರ್ಥಿಸಿದರು. ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಶೆಲ್ಲಿಕೇರಿ ಆಶಯ ನುಡಿ ಹೇಳಿದರು.ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಡಾ.ಸಿ.ಎಂ.ಜೋಶಿ ವಂದಿಸಿದರು.

    ಕೋಟ್..
    ಕನ್ನಡ ನಾಡು-ನುಡಿಗಾಗಿ ಸಾಹಿತ್ಯ ಸೇವೆ ಮಾಡಿರುವವರ ಕೃತಿಗಳ ಅವಲೋಕನದಿಂದ ಮೌಲ್ಯಗಳು ಬೆಳೆಯುತ್ತವೆ. ಸಾಹಿತ್ಯದ ಗಮ್ಯತೆ ಅರಿವಿಗೆ ಬರುತ್ತದೆ. ಸಾಹಿತ್ಯದಲ್ಲಿರುವ ಮೌಲ್ಯಗಳು ಮಕ್ಕಳಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡಲು ಕಸಾಪ ಕಂಕಣಬದ್ಧವಾಗಿದೆ. * ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ*

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts