More

    ಮತ್ತೊಮ್ಮೆ ಡ್ರಾಗೆ ತೃಪ್ತಿಪಟ್ಟ ಬೆಂಗಳೂರು ಎಫ್ ಸಿ

    ಮಾರ್ಗೊವಾ: ಅಂತಿಮ ಕ್ಷಣದವರೆಗೂ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹೋರಾಟದಲ್ಲಿ ಬೆಂಗಳೂರು ಎಫ್ ಸಿ ತಂಡ ಐಎಸ್‌ಎಲ್‌ನ ತನ್ನ 4ನೇ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎದುರು ಸಮಬಲ ಸಾಧಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ 2 ಗೋಲು ದಾಖಲಿಸಿ ಡ್ರಾಗೆ ತೃಪ್ತಿಪಟ್ಟುಕೊಂಡವು. ಇದರೊಂದಿಗೆ ಲೀಗ್‌ನಲ್ಲಿ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ 3ನೇ ಡ್ರಾ ಸಾಧಿಸಿದ ಬಿಎಫ್ ಸಿ 6 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿತು. ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ಎದುರು ಜಯ ದಾಖಲಿಸಿತ್ತು.

    ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ ಅನುಭವಿ ಆಟಗಾರ ಉದಾಂತ ಸಿಂಗ್ (70) ಮತ್ತೊಂದು ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರೂ ಪ್ರತಿಯಾಗಿ ಎದುರಾಳಿ ತಂಡ ಲೂಯಿಸ್ ಮಚಾಡೊ (78) ಗೋಲು ಸಿಡಿಸಿದರು. ಬಿಎಫ್ ಸಿ ಪರ ಜುವಾನಾನ್ (11ನೇ ) ಮೊದಲ ಗೋಲುಗಳಿಸಿದರೆ, ಲೂಯಿಸ್ ಮಚಾಡೊ (3) ನಾರ್ಥ್‌ಈಸ್ಟ್ ಪರ ಮೊದಲ ಗೋಲು ದಾಖಲಿಸಿದರು.

    ಮುಂದಿನ ಎದುರಾಳಿ: ಕೇರಳ ಬ್ಲಾಸ್ಟರ್ಸ್‌
    ಯಾವಾಗ: ಭಾನುವಾರ (ಡಿ.13)

    3ನೇ ಟಿ20 ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಭಾರತ ತಂಡ, ಆಸೀಸ್ ಎದುರು ಕ್ಲೀನ್‌ಸ್ವೀಪ್ ಅವಕಾಶ ತಪ್ಪಿಸಿಕೊಂಡ ಕೊಹ್ಲಿ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts