More

    ಸಮಯಕ್ಕೆ ಮಹತ್ವ ಕೊಟ್ಟರೆ ಉತ್ತಮ ಭವಿಷ್ಯ

    ಕೋಲಾರ: ಯುವಕರು ಸಮಯಕ್ಕೆ ಮಹತ್ವ ಕೊಟ್ಟರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ, ಸಾಮಾಜಿಕ ಜವಾಬ್ದಾರಿ ಅರಿತು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್​ ಸಿಂಧ್ಯಾ ಹೇಳಿದರು.

    ನಗರ ಹೊರವಲಯದ ಸ್ಮಾರ್ಟ್​ ಪದವಿ ಕಾಲೇಜು ಆವರಣದಲ್ಲಿ ಎಂಎನ್​ಜಿ ಪದವಿ ಪೂರ್ವ ಕಾಲೇಜು, ಸ್ಮಾರ್ಟ್​ ಪದವಿ ಕಾಲೇಜು ಮತ್ತು ಜಿಲ್ಲಾ ಸ್ಕೌಟ್ಸ್​ ಗೈಡ್ಸ್​ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮೂರು ದಿನಗಳ ರೋವರ್​ ರೇಂಜರ್​ ಮೂಟ್​ ಶಿಬಿರದಲ್ಲಿ ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಯುವಕರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಇದು ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಜಾಗೃತಗೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
    ಓದಿನ ಜತೆಗೆ ಕೌಶಲ ತರಬೇತಿ ಪಡೆದುಕೊಳ್ಳಬೇಕು. ಇದರಿಂದಾಗಿ ವಿದ್ಯಾಭ್ಯಾಸದ ನಂತರ ಕೆಲಸಕ್ಕೆ ಸೇರಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
    ಪ್ರಾಂಶುಪಾಲೆ ಸಹನಾ ಮಾತನಾಡಿ, ಸ್ಕೌಟ್ಸ್​ ಆಂಡ್​ ಗೈಡ್ಸ್​ನಿಂದ ಕೋವಿಡ್​ ವೇಳೆ ಸಲ್ಲಿಸಿದ ಸೇವೆ ಯಾರೂ ಮರೆತಿಲ್ಲ, ಶಿಕ್ಷಣ ಮಾತ್ರ ನೀಡದೇ ಸಮಾಜದ ಅಭಿವೃದ್ಧಿಗೆ ಬೇಕಾದ ಸಮುದಾಯ ಸೇವಾ ಶಿಬಿರಗಳನ್ನು ಆಯೋಜಿಸುತ್ತಾ ಜಿಲ್ಲೆಯಲ್ಲಿ ಉತ್ತಮ ಸೇವಾ ತಂಡದಿಂದ ನಿರ್ವಹಿಸುತ್ತಿದ್ದು, ಕಾಲೇಜಿನಿಂದ ಸಹಕಾರ ನೀಡಲಾಗುವುದು ಎಂದರು.
    ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಯುವಕರು ಹೊಸ ಚಿಂತನೆಗಳೊಂದಿಗೆ ಜಗತ್ತಿನ
    ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು. ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಮೂಲ ಆಶಯ ನಾಯಕತ್ವ ಗುಣಗಳನ್ನು ಬೆಳೆಸುವುದು, ಶಿಸ್ತು, ಸಮಯ ಪಾಲನೆ, ದೇಶಭಕ್ತಿ, ವಿಶ್ವಶಾಂತಿ ದೂತರಂತೆ ಕಾರ್ಯನಿರ್ವಹಿಸುತ್ತಾ ತಮ್ಮಲ್ಲಿ ತಾವೇ ಬದಲಾವಣೆ ಕಾಣುವುದಾಗಿದೆ ಎಂದು ತಿಳಿಸಿದರು.
    ಶಾಲಾ ಆಡಳಿತ ಮಂಡಳಿಯ ಸಂದೇಶ್​, ಸಂಸ್ಥೆಯ ಜಿಲ್ಲಾ ಆಯುಕ ಕೆ.ಆರ್​.ಸುರೇಶ್​, ಸ್ಥಾನಿಕ ಆಯುಕ್ತ ಬೇವಹಳ್ಳಿ ಶಂಕರ್​, ಕಾರ್ಯದರ್ಶಿ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ಸ್ಕೌಟ್​ ಬಾಬು, ಸ್ಥಾನಿಕ ಆಯುಕ್ತ ಸುಮಂಗಲಿ ನೊಹ, ದೇವಿ, ರತ್ನಮ್ಮ, ವಿಶ್ವನಾಥ್​, ನಿರಂಜನ್​, ಮಧು, ಚೇತನ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts