More

    ಖಾಸಗೀಕರಣದಿಂದ ಬದುಕು ಬೀದಿಗೆ ; ವಿದ್ಯುತ್ ಗುತ್ತಿಗೆದಾರರ ಆಕ್ರೋಶ

    ಗುಬ್ಬಿ: ವಿದ್ಯುತ್ ಕಂಪನಿಗಳ ಖಾಸಗೀಕರಣದಿಂದ ವಿದ್ಯುತ್ ಗುತ್ತಿಗೆದಾರರ ಬದುಕು ಅತಂತ್ರಗೊಳ್ಳಲಿದೆ ಎಂದು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮುನಿಸ್ವಾಮಿ ಆತಂಕ ವ್ಯಕ್ತಪಡಿಸಿದರು.

    ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು, ಖಾಸಗೀಕರಣದಿಂದ ಗುತ್ತಿಗೆದಾರರು, ಕಾರ್ಮಿಕರು ಹಾಗೂ ವಿದ್ಯುತ್ ಕಂಪನಿಗಳ ನೌಕರರು ಬೀದಿಗೆ ಬೀಳುತ್ತಾರೆ, ರೈತರು ಸಮಸ್ಯೆ ಅನುಭವಿಸಲಿದ್ದಾರೆ. ವಿದ್ಯುತ್ ಗುತ್ತಿಗೆ ನಂಬಿ ಬದುಕು ಕಟ್ಟಿಕೊಂಡಿರುವವರಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಗುತ್ತಿಗೆದಾರರು ಬಂಡವಾಳ ಹೂಡಿ ಕೆಲಸ ಮಾಡಿ ನಂತರ ಬಿಲ್ ಮಾಡಿಸಿಕೊಳ್ಳಲು ಪರದಾಡುತ್ತಾರೆ. ಆದರೆ ಖಾಸಗೀಕರಣ ಮಾಡಿದರೆ

    ಕಂಪನಿಗಳಿಗೆ ಮೊದಲೇ ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ಕೆಲಸ ಮಾಡುವ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ನಿಲ್ಲಿಸಬೇಕೆಂದು ಗುತ್ತಿಗೆದಾರ ಗುಡ್ಡದಹಳ್ಳಿ ಬಸವರಾಜು ಆಗ್ರಹಿಸಿದರು. ಬೆಸ್ಕಾಂ ಎಇಇ ಅನಿಲ್ ಅವರಿಗೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ರಂಗನಾಥಾರಾಧ್ಯ, ಪದಾಧಿಕಾರಿಗಳಾದ ತೊರೇಹಳ್ಳಿ ರಾಜು, ಮುದಿಗೆರೆ ಶಂಕರಪ್ಪ, ಆದಿರಾಜು, ದಯಾನಂದ್, ಗಂಗಾಧರ್ ಹಾಗೂ ಇತರರು ಇದ್ದರು.

    ವಿದ್ಯುತ್ ಗುತ್ತಿಗೆದಾರರ ಹೋರಾಟಕ್ಕೆ ಬೆಂಬಲ(ಕುಣಿಗಲ್): ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಅ.22ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ತಾಲೂಕು ಸಮಿತಿ ಬೆಂಬಲ ವ್ಯಕ್ತಪಡಿಸಿದ್ದು, ಪಟ್ಟಣದ ದೊಡ್ಡಕೆರೆ ಸೋಮೇಶ್ವರ ದೇಗುಲ ಬಳಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ತೀರ್ಮಾನ ಕೈಗೊಂಡಿತು.

    ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಸ್ಥಳೀಯ ಗುತ್ತಿಗೆದಾರರಿಗೆ 1ರಿಂದ 5 ಲಕ್ಷ ರೂ. ವರೆಗಿನ ವಿದ್ಯುತ್ ಕಾಮಗಾರಿಗಳ ತುಂಡು ಗುತ್ತಿಗೆ ನೀಡುವಂತೆ ಸರ್ಕಾರ ಆದೇಶಿಸಿದ್ದರೂ ಕಂಪನಿಗಳು ಈವರೆಗೂ ಕ್ರಮಕೈಗೊಂಡಿಲ್ಲ ಎಂದು ಸಮಿತಿ ಅಧ್ಯಕ್ಷ ಕೆ.ಎನ್.ನಾರಾಯಣ ಆರೋಪಿಸಿದರು. ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವುದು ಕಂಪನಿಗಳ ನೌಕರರು ಹಾಗೂ ಗುತ್ತಿಗೆದಾರರು ಮುಂದಿನ ದಿನದಲ್ಲಿ ತೀವ್ರ ಕಷ್ಟ ಅನುಭವಿಸಲಿದ್ದಾರೆ ಎಂದು ಗೌರವಾಧ್ಯಕ್ಷ ಆಲ್ಕರೆ ಕುಮಾರ್ ಆತಂಕ ವ್ಯಕ್ತಪಡಿಸಿದರು.

    ಜಿಲ್ಲಾ ಜಂಟಿ ಕಾರ್ಯದರ್ಶಿ ಜಿ.ಬಿ.ಶಿವರುದ್ರಚಾರ್, ಉಪಾಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಶಂಕಲಿಂಗೇಗೌಡ, ಜಂಟಿ ಕಾರ್ಯದರ್ಶಿ ಪಿ.ಟಿ.ಶೇಷಾಚಲಯ್ಯ, ಪದಾಧಿಕಾರಿಗಳಾದ ಕೆ.ನವೀನ್‌ಕುಮಾರ್, ಅಂಜಪ್ಪ, ಮಧು, ಕೃಷ್ಣಮೂರ್ತಿ, ಡಿ.ಎನ್,ನಾಗರಾಜು, ಪ್ರಭಾಕರಗುಪ್ತ, ಮರಿಯಪ್ಪ, ಪ್ರಕಾಶ್, ಗಂಗಾಧರಯ್ಯ, ಶಿವರಾಮ್, ಗಂಗಾಧರಯ್ಯ, ನಾಗೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts