More

  ಉನ್ನತ ಶಿಕ್ಷಣದಿಂದ ಉತ್ತಮ ಸಮಾಜ : ಬಿಇಒಡಿ ಗಿರಿಜೇಶ್ವರಿದೇವಿ ಹೇಳಿಕೆ

  ಮುಳಬಾಗಿಲು :  ಉನ್ನತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಿಇಒ ಡಿ.ಗಿರಿಜೇಶ್ವರಿದೇವಿ ಹೇಳಿದರು.
  ತಾಲೂಕಿನ ಉತ್ತನೂರು ಗ್ರಾಮದ ಎಂವಿಕೆ ಪ್ರೌಢಶಾಲೆ ಮತ್ತು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಏರ್ಪಡಿಸಿದ್ದ ಓಝೋಜ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪಡೆದು ಉತ್ತಮ ನಾಯಕತ್ವಗುಣ ಬೆಳೆಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದರು.

  ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಡತನದ ನಡುವೆ ಹಲವಾರು ಅಡೆ-ತಡೆ ಮೆಟ್ಟಿ ಉತ್ತಮ ವಿದ್ಯಾಭ್ಯಾಸ ಮಾಡಿದರು. ಅವರಿಗೆ ಜ್ಞಾನದ ಹಸಿವಿದ್ದರಿಂದ ಎಲ್ಲ ವಿಷಯ ಅಭ್ಯಾಸ ಮಾಡಿ ಜ್ಞಾನದ ಗಣಿಯಾಗಿದ್ದರು ಎಂದರು.

  ದುಗ್ಗಸಂದ್ರ ಜಿಪಂ ಮಾಜಿ ಸದಸ್ಯ ಉತ್ತನೂರು ವಿ.ಎಸ್.ಅರವಿಂದ್‌ಕುಮಾರ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸಿ.ಆರ್.ಅಶೋಕ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಉತ್ತನೂರು ಶ್ರೀನಿವಾಸ್, ಎಂವಿಕೆ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಎ.ಮಂಜುನಾಥ್, ಜ್ಞಾನ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಎನ್.ತಾಯಲೂರಪ್ಪ, ಗೌರವ ಸಲಹೆಗಾರ ಬಿ.ಕೆ.ನಾಗರಾಜ್, ಪದಾಧಿಕಾರಿಗಳಾದ ವಿ.ಸೋಮಶೇಖರ್, ರಾಮಕೃಷ್ಣಪ್ಪ, ಸುರೇಂದ್ರ, ಬಿ.ಎಂ.ಶಂಕರಪ್ಪ, ಹನುಮೇಶ್, ವಿ.ಚಿತ್ರಾ, ಫಕ್ರುದ್ದಿನ್, ನಟರಾಜ್, ರಾಮಾಂಜಿ ಇದ್ದರು

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts