More

    ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಟಿಕೆಟ್​ ಘೋಷಣೆ: ಅಧಿಕೃತ ಪಟ್ಟಿ ಇಲ್ಲಿದೆ…

    ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ‘ ಗಜಗರ್ಭ ಪ್ರಸವ’ ದಂತೆ ಆಡಳಿತ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

    ಮಾಜಿ ಡಿಸಿಎಂ ಲಕ್ಷ್ಮಣ ಸವದಿ ( ಲಿಂಗಾಯತ-ಗಾಣಿಗ), ಪಕ್ಷದ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್ ( ನೇಕಾರ- ಇತರ ಹಿಂದುಳಿದ ವರ್ಗ), ಪಕ್ಷದ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ( ಪರಿಶಿಷ್ಟ ಜಾತಿ-ಬಲ) ಹಾಗೂ ಹೇಮಲತಾ ನಾಯಕ್ ಹೆಸರುಗಳು ಅಂತಿಮವಾಗಿವೆ.

    ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಹೆಸರು ಪ್ರಕಟಿಸಲಾಗಿದೆ

    ಈ ಮುಂಚೆಯೇ ಹೊರ ಬಿದ್ದ ಸುಳಿವಿನಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಕೈಬಿಟ್ಟಿರುವುದು ದೃಢಪಟ್ಟಿದ್ದು, ಪಕ್ಷದೊಳಗೆ ಕುದಿಮೌನ ಆವರಿಸಿದೆ.

    ದೊಡ್ಡ ಸಂಖ್ಯೆಯಲ್ಲಿ ಆಕಾಂಕ್ಷಿಗಳು, ಜಾತಿ- ವರ್ಗಗಳ ಪ್ರಾತಿನಿಧ್ಯ ನಿಭಾಯಿಸಬೇಕಾದ ಒತ್ತಡಕ್ಕೆ ಸಿಲುಕಿದ್ದ ಪಕ್ಷದ ವರಿಷ್ಠರು ಸಾಕಷ್ಟು ಕಸರತ್ತು ನಡೆಸಿ, ಸೋಮವಾರ ತಡರಾತ್ರಿ ಅಂತಿಮಗೊಳಿಸಿದೆ. ಆದರೂ ನಿರ್ಣಯದ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲೆಂದು ನಾಮಪತ್ರ ಸಲ್ಲಿಕೆ ಕೊನೇ ದಿನದವರೆಗೂ ಗೌಪ್ಯತೆ ಕಾಯ್ದುಕೊಂಡಿತು ಎಂದು ಮೂಲಗಳು ತಿಳಿಸಿವೆ.

    ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಟಿಕೆಟ್​ ಘೋಷಣೆ: ಅಧಿಕೃತ ಪಟ್ಟಿ ಇಲ್ಲಿದೆ...

    ಬಿ.ವೈ. ವಿಜಯೇಂದ್ರಗೆ ಬಿಗ್​ ಶಾಕ್​ ಕೊಟ್ಟ ಬಿಜೆಪಿ ಹೈಕಮಾಂಡ್​

    ಮಹಿಳೆಯರ ಬದಲು ಪುನಃ ಅಲ್ಪಸಂಖ್ಯಾತರು: ಕಾಂಗ್ರೆಸ್​ನಲ್ಲಿ ಶುರುವಾಯ್ತು ಅಸಮಾಧಾನದ ಹೊಗೆ

    ಗಂಭೀರ ಆರೋಪ ಮಾಡಿ ಗಂಡ, ಮಾವನ ವಿರುದ್ಧವೇ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟಿ ಚೈತ್ರಾ ಹಳ್ಳಿಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts