More

    ದಂಡ ಕಟ್ಟುವಂತೆ ಒತ್ತಾಯ: ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವಕ ಮಾಡಿದ್ದೇನು?

    ಬೆಂಗಳೂರು: ರಾಜಧಾನಿಯಲ್ಲಿ ಸಂಚಾರಿ ಪೊಲೀಸರಿಂದ ದಂಡ ಸಂಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಇದರ ನಡುವೆಯೇ ಪೊಲೀಸರು ಮತ್ತು ಸವಾರರು ನಡುವಿನ ಗಲಾಟೆ ಪ್ರಕರಣಗಳು ವರದಿಯಾಗುತ್ತಲೇ ಇವೆ.

    ಇಂದು ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಬೈಕ್ ಸವಾರ ಯಶ್ವಂತ್​ ಎಂಬುವನ ಜತೆ ಎಎಸ್ಐ ಚಂದ್ರಶೇಖರ್ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಎಎಸ್​​ಐ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ಮನೆಗೆ ಹೊರಟಿದ್ದ ಗಂಡ-ಹೆಂಡ್ತಿ, 5 ತಿಂಗಳ ಹಸುಗೂಸು ಮಾರ್ಗಮಧ್ಯೆ ಹೆಣವಾದರು!

    ಯಶ್ವಂತ್ ಆಕ್ಟಿವ್ ಬೈಕ್ ಮೇಲೆ ಮೂರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಕೇಸ್ ಇತ್ತು. ಗಾಡಿ ಹಿಡಿದು 1500 ರೂಪಾಯಿ ದಂಡ ಕಟ್ಟುವಂತೆ ಎಎಸ್​ಐ ಒತ್ತಾಯ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಹಾಗೂ ಬೈಕ್ ಸವಾರ ನಡುವೆ ಗಲಾಟೆ ನಡೆದಿದೆ.

    ಬೈಕ್ ಸವಾರನ ಮೇಲೆ ಸ್ಥಳದಲ್ಲಿದ್ದ ಪೊಲೀಸ್ ಹಾಗೂ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಇದೇ ವೇಳೆ ಯಶ್ವಂತ್ ಬೈಕ್ ಸಮೇತ ಪರಾರಿಯಾಗಿದ್ದು, ಈ ಬಗ್ಗೆ ವಿಜಯನಗರ ಠಾಣೆಗೆ ಎಎಸ್​ಐ ದೂರು ನೀಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    1 ಕೋಟಿ ರೂ. ವಂಚನೆ: ಮಾಜಿ ಸಚಿವರ ಮೊಮ್ಮಗಳ ವಿರುದ್ಧ ಪ್ರಕರಣ ದಾಖಲು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts