More

    ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ವಾರದ ಗಡುವು : ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಕ್ರಮ

    ಬೆಂಗಳೂರು : ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ನ.15ರ ವರೆಗೆ ಗಡುವು ನೀಡಲಾಗಿದ್ದು, ವಿಲವಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ 1,300 ಕಿ.ಮೀ ಹೆಚ್ಚು ವಾಹನ ಸಂಚಾರ ಮಾಡುವ ಪ್ರಮುಖ ರಸ್ತೆಗಳಿವೆ. ಈ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ತಲಾ 25 ಕಾರ್ಮಿಕರನ್ನು ಒಳಗೊಂಡ 31 ತಂಡ ನಿರ್ಮಿಇಸಿಕೊಂಡು ಕಾರ್ಯನಿರ್ವಹಿಸಲು ಇಂಜಿನಿಯರ್‌ಗಳಿಗೆ ಆದೇಶಿಸಲಾಗಿದೆ. ಆದರೆ, ಕಾರ್ಮಿಕರ ಕೊರತೆ ಎದುರಾಗಿದ್ದು, ಕೇವಲ 10 ತಂಡಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಲಭ್ಯವಿರುವ ತಂಡದ ಕಾರ್ಮಿಕರನ್ನು ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ತೊಡಗಿಸಿಕೊಂಡು ವಾರದೊಳಗೆ (ನ.15) ಎಲ್ಲ ಗುಂಡಿ ಮುಚ್ಚಲು ಗಡುವು ನೀಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಹಾಟ್ ಮಿಕ್ಸ್ 30 ಟ್ರಕ್‌ಗೆ ಹೆಚ್ಚಳ: ಪಾಲಿಕೆಯ ಡಾಂಬರ್ ಹಾಟ್‌ಮಿಕ್ಸ್ ಘಟಕದಿಂದ ನಿತ್ಯ 10 ಟ್ರಕ್ ಡಾಂಬರ್ ಬಳಕೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 3 ದಿನದಲ್ಲಿ 20 ಟ್ರಕ್‌ಗೆ ಹಚ್ಚಳ ಮಾಡುತ್ತೇವೆ. ಮುಂದೆ ನ.17ರ ಒಳಗಾಗಿ 31 ಟ್ರಕ್ ಹಾಟ್‌ಮಿಕ್ಸ್ ಉತ್ಪಾದಿಸಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಈ ವೇಳೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಕಲಬುರಗಿ ಸೇರಿ ವಿವಿಧೆಡೆಯಿಂದ ಕಾರ್ಮಿಕರನ್ನು ಕರೆತಂದು ತಲಾ 25 ಕಾರ್ಮಿಕರ 31 ತಂಡ ರಚಿಸಲಾಗುವುದು. ನಂತರ ಪಾಲಿಕೆ ಮುಖ್ಯ ರಸ್ತೆಗಳಿಗೆ 10 ತಂಡ, ಹಾಗೂ ಎಂಟು ವಲಯಗಳಿಗೆ 21 ತಂಡಗಳ ಕಾರ್ಮಿಕರನ್ನು ಬಳಸಿಕೊಂಡು ವಾರ್ಡ್‌ವಾರು ಇರುವ ಎಲ್ಲ ರಸ್ತೆಗಳ ಗುಂಡಿ ಮುಚ್ಚಲಾಗುವುದು ಎಂದು ಮಾಹಿತಿ ನಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts