More

    ಡಿ.ಜೆ. ಹಳ್ಳಿ ವ್ಯಾಪ್ತಿಯ 100ಕ್ಕೂ ಹೆಚ್ಚು ರೌಡಿಶೀಟರ್ಸ್​ ಮನೆಗಳ ಮೇಲೆ ದಾಳಿ: ಮಾರಕಾಸ್ತ್ರ, ಮಾದಕ ವಸ್ತುಗಳು ಪತ್ತೆ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಶೀಟರ್ಸ್​ಗೆ ಬೆಂಗಳೂರು ಪೊಲೀಸರು ಇಂದು (ಏಪ್ರಿಲ್​ 24) ಶಾಕ್ ನೀಡಿದ್ದಾರೆ. ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯ ವಿವಿಧ ಕಡೆ 100ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆದಿದೆ.

    ಕೆ.ಜಿ. ಹಳ್ಳಿ ಉಪವಿಭಾಗದ ಎಸಿಪಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಗೆ ದಾಳಿ ನಡೆದಿದ್ದು, ರೌಡಿಗಳ ಮನೆಯಲ್ಲಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ದಾಳಿ ವೇಳೆ ಕೆಲ ಮಾರಕಾಸ್ತ್ರ ಹಾಗೂ ಮಾದಕವಸ್ತುಗಳು ಪತ್ತೆಯಾಗಿವೆ. ಎನ್.ಬಿ.ಡಬ್ಲೂ ಉಲ್ಲಂಘಿಸಿ ನ್ಯಾಯಾಲಯಕ್ಕೆ ಹಾಜರಾಗದ ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ.

    ಇದನ್ನೂ ಓದಿ: ಒಂದೇ ಹುಡುಗನ ಜತೆ 3 ಬಾರಿ ಬಾಲಕಿ ಎಸ್ಕೇಪ್​! ಪಾಲಕರನ್ನು ಪರಿ ಪರಿಯಾಗಿ ಬೇಡಿಕೊಂಡ ಪೊಲೀಸರು

    ಪ್ರಮುಖ ಹತ್ತು ರೌಡಿಗಳ ಪಟ್ಟಿ

    ದಾಳಿಯ ವೇಳೆ ಪ್ರಮುಖ ಹತ್ತು ರೌಡಿಗಳ ಪಟ್ಟಿ ಮಾಡಲಾಗಿದೆ. ಜೊಲ್ಲು ಇಮ್ರಾನ್, ಅನಿಸ್, ಜಾಹಿರ್ ಅಬ್ಬಾಸ್, ಹುಸೇನ್ ಷರೀಫ್, ಗ್ರಾನೈಟ್ ಸಾದಿಕ್, ಸಾಕಿರ್, ಭಿಂಡಿ ಇರ್ಫಾನ್, ಯೂಸೆಫ್, ತೌಫಿಕ್ ಹಾಗೂ ನೆಲ್ಸನ್ ಹೆಸರು ಪಟ್ಟಿಯಲ್ಲಿದೆ. ಆಸಿಫ್ ಮನೆಯಲ್ಲಿ 105 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

    ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ರೌಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

    ರೋಡ್​ ಶೋ ನಡೆಸಿ ರೆಸಾರ್ಟ್​ಗೆ ತೆರಳಿದ ರಾಹುಲ್​ ಗಾಂಧಿ! ಜತೆಗೆ ಯಾರೆಲ್ಲಾ ಇದ್ರು?

    ಸ್ಟಾರ್​ ನಟಿ ಪಟ್ಟ ಕಳೆದುಕೊಂಡ ಬಳಿಕ ಬದಲಾದ ಸಮಂತಾ: ತೆಲುಗು ನಿರ್ಮಾಪಕನ ಸ್ಪೋಟಕ ಹೇಳಿಕೆ

    ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ ದಿನಾಂಕ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts