More

    ಎಸ್​ಐಟಿ ವಿಚಾರಣೆಗೆ ಬರುವ ವೇಳೆಯೂ ಆರೋಪಿಗಳ ಮಾಸ್ಟರ್ ಪ್ಲಾನ್: ಕ್ಯಾಬ್​ ಚಾಲಕ ಹೇಳಿದ್ದಿಷ್ಟು..!

    ಬೆಂಗಳೂರು: ಎಸ್​ಐಟಿ ವಿಚಾರಣೆಗೆ ಬರುವ ವೇಳೆಯೂ ಮಾಜಿ ಸಚಿವ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಆರೋಪಿಗಳು ಮಾಸ್ಟರ್​ ಪ್ಲಾನ್ ಮಾಡಿಕೊಂಡೆ ಬಂದಿದ್ದಾರೆ.

    ಆರೋಪಿಗಳಾದ ಶ್ರವಣ್​ ಮತ್ತು ನರೇಶ್​, ಎಲ್ಲಿಯೂ ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಬಹಿರಂಗಗೊಳಿಸಿಲ್ಲ. ಇಂದು ಮೆಜೆಸ್ಟಿಕ್​ನಲ್ಲಿ ಟ್ಯಾಕ್ಸಿ ಕ್ಯಾಬ್ ಹತ್ತಿದ ಆರೋಪಿಗಳು, ಆಡುಗೋಡಿ ಟೆಕ್ನಿಕಲ್​ ಸೆಂಟರ್​ಗೆ ಬಿಡುವಂತೆ‌ ಕ್ಯಾಬ್ ಚಾಲಕನಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೆಜೆಸ್ಟಿಕ್​ನಿಂದ ಆಡುಗೋಡಿಗೆ ಇಳಿಸಿದ್ದಕ್ಕೆ 1 ಸಾವಿರ ರೂ. ಹಣವನ್ನು ಸಹ ಆರೋಪಿಗಳು ನೀಡಿದ್ದಾರೆ.

    ಕ್ಯಾಬ್ ಬುಕ್ ಮಾಡಿದ್ರೆ ಮಾತ್ರ ಕರೆದುಕೊಂಡು ಹೋಗ್ತೇನೆ ಸರ್, ಇಲ್ಲದಿದ್ದರೆ ಪೊಲೀಸರು ಹಿಡಿತಾರೆ ಎಂದು ಚಾಲಕ ಹೇಳಿದ್ದಾನೆ. ನಾವು ಹೇಳಿಕೊಳ್ಳುತ್ತೇವೆ ನಡಿಯಪ್ಪ ಎಂದ ಬಳಿಕ ನರೇಶ್ ಹಾಗೂ ಶ್ರವಣ್​ನನ್ನು ಕರೆತಂದು ಆಡುಗೋಡಿ ಟೆಕ್ನಿಕಲ್​ ಕೇಂದ್ರಕ್ಕೆ ಬಿಟ್ಟಿದ್ದಾಗಿ ಕ್ಯಾಬ್ ಚಾಲಕ ಮಾಹಿತಿ ನೀಡಿದ್ದಾರೆ.

    ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ವಿಡಿಯೋ ವೈರಲ್​ ಆಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈ ಕೇಸ್​ನ ಸೂತ್ರಧಾರಿಗಳೆಂದೇ ಹೇಳಲಾದ ಬಿ.ಎಂ.ನರೇಶ್​ ಗೌಡ ಮತ್ತು ಶ್ರವಣ್​ ಇವರಿಬ್ಬರು ಇಂದು ಎಸ್​ಐಟಿ(ವಿಶೇಷ ತನಿಖಾ ತಂಡ) ಮುಂದೆ ಹಾಜರಾಗಿದ್ದಾರೆ. ನರೇಶ್​ ಮತ್ತು ಶ್ರವಣ್​ಗೆ ಜೂ.8ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕ ನಾಲ್ಕು ದಿನಕ್ಕೆ ಅಂದರೆ ಜೂ.12ರಂದು ತಮ್ಮ ವಕೀಲರೊಂದಿಗೆ ಆಡುಗೋಡಿ ಟೆಕ್ನಿಕಲ್​ ಸೆಂಟರ್​ನಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಸಿಸಿಬಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸುತ್ತಿದ್ದಾರೆ.

    ಇತ್ತ ನರೇಶ್​ ಮತ್ತು ಶ್ರವಣ್​ನನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳು ಸ್ವತಂತ್ರರು ಎಂದು ಕೋರ್ಟ್​ ಹೇಳಿತ್ತು. ಅವಶ್ಯವಿದ್ದಲ್ಲಿ ಬಂಧಿಸುವ ಸಾಧ್ಯತೆ ಇದ್ದು, ಶ್ರವಣ್​ ಮತ್ತು ನರೇಶ್​ ಕಥೆ ಏನಾಗುತ್ತೆ ಎಂಬ ಕುತೂಹಲ ಹೆಚ್ಚಿದೆ. ಅಶ್ಲೀಲ ಸಿಡಿ ಬಯಲಾಗುತ್ತಿದ್ದಂತೆ ನರೇಶ್​ ಮತ್ತು ಶ್ರವಣ್​ ವಿರುದ್ಧ ರಮೇಶ್​ ಜಾರಕಿಹೊಳಿ ಹನಿಟ್ರ್ಯಾಪ್​ ಮತ್ತು ಬ್ಯ್ಲಾಕ್​ಮೇಲ್​ ಆರೋಪ ಮಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ದಿಗ್ವಿಜಯ ನ್ಯೂಸ್​)

    ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​! ಮುಂದೇನಾಗುತ್ತೆ?

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ವೈದ್ಯರ ಮೇಲೆ ಹಲ್ಲೆ : ಜೂನ್​ 18 ರಂದು ಐಎಂಎ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts