More

    ಮದುವೆ ಫಿಕ್ಸ್, ಆದ್ರೆ ಗೆಳತಿಯ ಖಾಸಗಿ​​​ ಚಿತ್ರಗಳನ್ನ ಹಂಚಿಕೊಂಡ ಬಾಯ್​ಫ್ರೆಂಡ್..! ಗರ್ಲ್​​​ಫ್ರೆಂಡ್ಸ್​​​ನ ಫೋಟೋ ಶೇರ್​ಗೆಂದೇ ವಾಟ್ಸ್​ಆ್ಯಪ್ ಗ್ರೂಪ್​​

    ಬೆಂಗಳೂರು: 26 ವರ್ಷದ ಯುವಕನೊಬ್ಬ ತನ್ನ ಗೆಳತಿಯ ಖಾಸಗಿ ಫೋಟೋಗಳನ್ನ ತಿರುಚಿ, ಅಶ್ಲೀಲ ಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಶ್ವರ್ಯಕರ ವಿಚಾರ ಏನಂದ್ರೆ ಆತ ಮದುವೆಯಾಗ ಬೇಕಿದ್ದ ಹುಡುಗಿಗೇ ಈತ ಹೀಗೆ ಮಾಡಿದ್ದಾನೆ. ಇನ್ನೇನು ಕೆಲವೇ ತಿಂಗಳಲ್ಲಿ ಈತ ಫೋಟೋ ಶೇರ್​​​ ಮಾಡಿದ ಹುಡುಗಿಯನ್ನ ಮದುವೆಯಾಗ ಬೇಕಿತ್ತು. ಆದರೆ ಹುಡುಗಿಯ ಅಶ್ಲೀಲ ಫೋಟೋವನ್ನ ತನ್ನ ಸ್ನೇಹಿತರೊಂದಿಗೆ ಈತ ಹಂಚಿಕೊಂಡಿದ್ದಾನೆ.


    ತಮಿಳುನಾಡಿನ ವೆಲ್ಲೂರು ಮೂಲದ ಸಂಜಯ್ ಮತ್ತು ಆತನ ಗೆಳತಿ ಬೆಂಗಳೂರಿಗೆ ಬಂದು ಲಿವ್​-ಇನ್​ ರಿಲೇಶನ್​ಫಿಪ್​​​ನಲ್ಲಿದ್ದು, ಒಂದೇ ಮನೆಯಲ್ಲಿ ನೆಲೆಸಿದ್ದರು. ಇಬ್ಬರೂ 10 ನೇ ತರಗತಿಯಿಂದಲೂ ಪರಸ್ಪರ ಪರಿಚಯಸ್ಥರಾಗಿದ್ದು, ಒಟ್ಟಿಗೆ ಬಿ ಪ್ಲಾನಿಂಗ್ ಕೋರ್ಸ್ ಅನ್ನು ಮಾಡಿದ್ದಾರೆ.
    ಇವರಿಬ್ಬರ ಒಡನಾಟದ ಬಗ್ಗೆ ಮನೆಯವರಿಗೂ ಅರಿವಿತ್ತು. ಮನೆಯವರು ಇವರಿಬ್ಬರ ಮದುವೆಗೆ ವ್ಯವಸ್ಥೆಯನ್ನೂ ಮಾಡಿದ್ದರು.


    ಆದರೆ ಈ ಹಿಂದೊಮ್ಮೆ 2021 ರಲ್ಲಿ ಮಹಿಳೆಯ ತಿರುಚಲಾದ ಖಾಸಗಿ ಫೋಟೋ ಒಂದನ್ನ ಇನ್ಸ್​​ಟಾಗ್ರಾಂನಲ್ಲಿ ಶೇರ್​​ ಮಾಡಲಾಗಿತ್ತು. ತಕ್ಷಣವೇ ಆಕೆ ಆ ಫೋಟೋವನ್ನ ತೆಗೆದು ಹಾಕುವಂತೆ ಸೈಬರ್​​ ಪೊಲೀಸರ ಬಳಿ ತೆರಳಿ ದೂರು ದಾಖಲಿಸಿದ್ದು, ಅದನ್ನ ತೆಗೆದು ಹಾಕಲಾಗಿತ್ತು. ಇದೀಗ ಮತ್ತೆ 2023ರ ಜೂನ್​ ತಿಂಗಳಿನಲ್ಲಿ, ಆಕೆಯ ಸ್ಪಷ್ಟ ಚಿತ್ರವನ್ನ ಮತ್ತೊಮ್ಮೆ ಹಂಚಿಕೊಳ್ಳಲಾಗಿದೆ. ಆಗ ಆಕೆ ಮತ್ತೊಮ್ಮೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.


    ಪೊಲೀಸರು ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಐಪಿಸಿಯ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆಶ್ಚರ್ಯಕರ ಮಾಹಿತಿಯೊಂದು ಹೊರ ಬಿದ್ದಿದೆ.


    ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ತಿರುಚಲಾದ ಫೋಟೋಗಳ ಹಿಂದೆ 10 ನೇ ತರಗತಿಯಿಂದಲೂ ಪ್ರೀತಿಸಿದ್ದ ಸಂಗಾತಿ ಸಂಜಯ್​ನ ಕೈವಾಡವಿದೆ ಅನ್ನೊ ವಿಚಾರ ಬಯಲಿಗೆ ಬಂದಿದೆ. ಈತ ಫೋಟೋಗಳನ್ನ ತಿರುಚೋಕೆ BOT ಅಪ್ಲಿಕೇಶನ್ ಬಳಸುತ್ತಿದ್ದ.

    ಇದೇ ರೀತಿ ಆತನ ಸ್ನೇಹಿತರ ಗುಂಪು ವಾಟ್ಸ್​ಆ್ಯಪ್​ನಲ್ಲಿ ಗ್ರೂಪ್​ ಮಾಡಿಕೊಂಡು ತಮ್ಮ ಗರ್ಲ್​ಪ್ರೆಂಡ್ಸ್​​​ನ ಖಾಸಗಿ ಫೋಟೋಗಳನ್ನ ಹಂಚಿಕೊಂಡಿರುವ ವಿಚಾರವೂ ಬೆಖಲಿಗೆ ಬಂದಿದೆ.


    ಈತ ಟೆಲಿಗ್ರಾಂ ಮತ್ತು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿದ್ದ 12 ಜನರೊಂದಿಗೆ ಇದರ ಫೋಟೋವನ್ನ ಹಂಚಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಗೆಳತಿಯರು, ಸಂಬಂಧಿಕರು ಮತ್ತು ಸ್ನೇಹಿತರ ಸ್ಪಷ್ಟ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಸದ್ಯ ಪೊಲೀಸರು ತನಿಖೆ ನಡೆಸಿ ಶಿಕ್ಷೆ ನೀಡಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts