More

    ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕಂಬಳ; ಗೆದ್ದ ಕೋಣಗಳಿಗೆ ಕೊಡಲಾಗುವ ಬಹುಮಾನ ಎಷ್ಟು ಗೊತ್ತಾ?

    ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದೆ. ಕಂಬಳಕ್ಕೆ ಬರುವ ಕೋಣಗಳನ್ನು ನೋಡುವ ಖುಷಿ ಒಂದೆಡೆಯಾದ್ರೆ ಇತ್ತ ಕಂಬಳ ಮಹೋತ್ಸವದಲ್ಲಿ ಗೆಲ್ಲುವ ಕೋಣಗಳಿಗೆ ಭಾರೀ ಮೊತ್ತದ ನಗದು ಹಾಗೂ ಚಿನ್ನವನ್ನು ನೀಡಲಾಗುತ್ತದೆ.

    ಕಂಬಳ ವಿಜೇತರ ಬಹುಮಾನ ವಿವರ ಹೀಗಿದೆ: ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜತೆಗೆ 8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.

    ಬೆಂಗಳೂರು ಕರಾವಳಿ ಕರ್ನಾಟಕದ 18 ಲಕ್ಷ ಜನರಿಗೆ ನೆಲೆಯಾಗಿದೆ. ಅವರಲ್ಲಿ ಸುಮಾರು ಎಂಟು ಲಕ್ಷ ಜನರು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಗಳಿವೆ. ಕಂಬಳದ ವೇಳೆ ಆಹಾರ, ಕಲಾಕೃತಿಗಳು ಮತ್ತು ಇತರ ವಸ್ತುಗಳ 150 ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತದೆ.

    ಆರು ವಿಭಾಗಗಳಲ್ಲಿ ನಡೆಯಲಿದೆ ಬೆಂಗಳೂರು ಕಂಬಳ: ಕನೆಹಲಗೆ, ಅಡ್ಡಹಲಗೆ, ನೇಗಿಲು ಹಿರಿಯ ಮತ್ತು ಕಿರಿಯ ಜೊತೆಗೆ ಹಗ್ಗ ಹಿರಿಯ ಮತ್ತು ಕಿರಿಯ ಎಂಬ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.‌

    ಕಂಬಳ ವೈಶಿಷ್ಟ್ಯ: 1)  ಕಂಬಳ ‘ಕರೆ’ (ಟ್ರ್ಯಾಕ್)ಗೆ ‘ರಾಜ ಮಹಾರಾಜ’ ಎಂದು ಹೆಸರಿಸಲಾಗಿದೆ.

    2) ಕಾರ್ಯಕ್ರಮದ ಮುಖ್ಯವೇದಿಕೆಗೆ ಪುನೀತ್ ರಾಜಕುಮಾರ್ ಹೆಸರು. ಸಾಂಸ್ಕೃತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ಹೆಸರು ನೀಡಲಾಗಿದೆ.

    3) ‘ಕರಾವಳಿಯ ಯಕ್ಷಗಾನ, ಹುಲಿವೇಷ ಕುಣಿತ ಕಂಬಳಕ್ಕೆ ಪ್ರವೇಶ ಉಚಿತ. 180ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಹಪ್ಪಳದಿಂದ ಕೋರಿ (ಕೋಳಿ) ರೊಟ್ಟಿಯವರೆಗೆ ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು, ವಸ್ತು ಪ್ರದರ್ಶನ ಲಭ್ಯ ಇರುತ್ತದೆ.

    4) ಗ್ಯಾಲರಿಯಲ್ಲಿ 6ರಿಂದ 7ಸಾವಿರ ಜನರು ಕುಳಿತುಕೊಳ್ಳಲು ಅವಕಾಶ ಇರುತ್ತದೆ. 24 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.

    5) ನ. 25ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾ ಮಾಡಲಿದ್ದಾರೆ.

    ಕಂಬಳಕ್ಕೆ ಸಾರ್ವಜನಿಕರಿಗೆ ಫ್ರೀ: ಎಲ್ಲರೂ ಬಂದು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗ್ಯಾಲರಿ ವ್ಯವಸ್ಥೆಯು ಇರಲಿದೆ. ಸಾರ್ವಜನಿಕರು ಈ ಕಂಬಳಕ್ಕೆ ಬರಲಿದ್ದಾರೆ. ವಿವಿಐಪಿ, ವಿಐಪಿಗೆ ಸೆಪೆರೇಟ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಟಿಕೆಟ್ ಇಲ್ಲ. ಫ್ರೀಯಾಗಿ ಬಂದು ನೋಡಬಹುದು. ಬಂದವರಿಗೆ ಊಟದ ವ್ಯವಸ್ಥೆ ಕೂಡ ಇರಲಿದೆ. ಕುಟುಂಬ ಸಮೇತವಾಗಿ ಬಂದು ವೀಕ್ಷಿಸಬಹುದು.

    ನ. 24 ರಂದು ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಬಸವರಾಜ್ ಬೊಮ್ಮಯಿ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಶಾಸಕರು, ಸಚಿವರುಗಳು ಬರಲಿದ್ದಾರೆ. ಸರ್ಕಾರದಿಂದ ಒಂದು ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ 7 ರಿಂದ 8 ಕೋಟಿ ಖರ್ಚಾಗುತ್ತಿದೆ. ಉಳಿದ ಹಣವನ್ನ ಸಂಘ- ಸಂಸ್ಥೆಗಳಿಂದ ಸಂಗ್ರಹಿಸಲಾಗಿದೆ.

    ಕಂಬಳಕ್ಕೆ ತಾರಾ ಮೆರಗು: ಮಂಗಳೂರಿನ 80 % ರಷ್ಟು ಸಿನಿಮಾ ನಟಿ – ನಟಿಯರು ಕಂಬಳಕ್ಕೆ ಬರಲಿದ್ದಾರೆ. ಅನುಷ್ಕ ಶೆಟ್ಟಿ ಬರ್ತಾರೆ. ಶಿವಣ್ಣ, ಸುದೀಪ್, ಉಪೇಂದ್ರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಬರ್ತಾರೆ.

    ಬೆಂಗಳೂರು ಕಂಬಳಕ್ಕೆ ದಿನಗಣನೆ; ಇಲ್ಲಿವೆ ಕುತೂಹಲಕಾರಿ ಸಂಗತಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts