More

    ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕುಸಿದ ರಸ್ತೆ: ವಾಹನಗಳು ಚೆಲ್ಲಾಪಿಲ್ಲಿ

    ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಸಿಲಿಕಾನ್​ ಸಿಟಿಯಲ್ಲಿ ಸುರಿದ ಗುಡುಗು-ಸಿಡಿಲ ಸಹಿತ ಭಾರಿ ಮಳೆಗೆ ಕಾವೇರಿ ನಗರದ ಲಕ್ಷ್ಮೀದೇವಿ ನಗರದಲ್ಲಿ ಭೂಕುಸಿತ ಸಂಭವಿಸಿದೆ.

    ಮೆಜೆಸ್ಟಿಕ್​, ಲಾಲ್​ಬಾಗ್​, ಕೆ.ಆರ್. ಮಾರುಕಟ್ಟೆ, ಯಶವಂತಪುರ ಸೇರಿದಂತೆ ನಗರದ ಬಹುತೇಕ ಕಡೆ ಇಂದು ಬೆಳ್ಳಂಬೆಳಗ್ಗೆ ಒಂದು ಗಂಟೆ ಕಾಲ ನಿರಂತರ ಮಳೆಯಾಯಿತು. ಇದರ ಪರಿಣಾಮ ಲಕ್ಷ್ಮೀದೇವಿ ನಗರದ ವಾರ್ಡ್​ ನಂಬರ್​ 42ರಲ್ಲಿ ರಸ್ತೆ ಕುಸಿದಿದ್ದು, ವಾಹನಗಳೆಲ್ಲ ನೆಲಕ್ಕುರುಳಿವೆ. ಕೆಲ ವಾಹನ ಬಿರುಕುಬಿಟ್ಟಿರುವ ಮಣ್ಣಿನ ಅಡಿಯಲ್ಲಿ ಸಿಲುಕಿದ್ದರೆ, ಇನ್ನು ಕೆಲ ವಾಹನ ಸಮತಟ್ಟಾದ ಪ್ರದೇಶದಲ್ಲಿನ ಮಣ್ಣು ಕುಸಿದಿದ್ದರಿಂದ ಒಂದೇ ಕಡೆಗೆ ವಾಲಿಕೊಂಡುನಿಂತಿವೆ.

    ಮಳೆಯ ರಭಸಕ್ಕೆ ಸುಮಾರು 100 ಮೀಟರ್​ ಉದ್ದದ ರಸ್ತೆಯೇ ಕುಸಿದಿದ್ದು, ವಾಹನಗಳಿಗೆ ಹಾನಿಯಾಗಿರುವುದಲ್ಲದೇ, ಸಂಚಾರಕ್ಕೂ ಅಡ್ಡಿಯಾಗಿದೆ. ಕುಸಿದ ರಸ್ತಯನ್ನು ನೋಡಲು ಸ್ಥಳೀಯರು ಧಾವಿಸಿದ್ದು, ಕಳಪೆ ಕಾಮಗಾರಿಯೇ ಘಟನೆಗೆ ಕಾರಣ ಎಂದು ಆಪಾದಿಸಿದ್ದಾರೆ.

    ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳ್ಳಂಬೆಳಗ್ಗೆ ರಸ್ತೆಗಿಳಿದಿದ್ದ ಸ್ಥಳೀಯರಿಗೂ ಮಳೆರಾಯ ಅಡ್ಡಿಯುಂಟು ಮಾಡಿದ್ದಾನೆ. ಹಲವೆಡೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ಸಂಚಾರ ದಟ್ಟನೆ ಇಲ್ಲದಿರುವುದರಿಂದ ಹಿಂದಿಗಿಂತ ಹೆಚ್ಚೇನು ಪ್ರಭಾವ ಬೀರಲಿಲ್ಲ. ಲಾಕ್​ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಜನರು ಮನೆಯಲ್ಲೇ ಉಳಿದಿರುವುದರಿಂದ ವರುಣನಿಂದ ಜನಜೀವನಕ್ಕೇನು ಹೆಚ್ಚಿನ ತೊಂದರೆಯಾಗಲಿಲ್ಲ.

    ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕುಸಿದ ರಸ್ತೆ: ವಾಹನಗಳು ಚೆಲ್ಲಾಪಿಲ್ಲಿ

    ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಸಿಲಿಕಾನ್​ ಸಿಟಿಯಲ್ಲಿ ಸುರಿದ ಗುಡುಗು-ಸಿಡಿಲ ಸಹಿತ ಭಾರಿ ಮಳೆಗೆ ಕಾವೇರಿ ನಗರದ ಲಕ್ಷ್ಮೀದೇವಿ ನಗರದಲ್ಲಿ ಭೂಕುಸಿತ ಸಂಭವಿಸಿದೆ.#Bengaluru #HeavyRain #RainWater #Landslide #BengaluruRain

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 23, 2020

    ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಹಲವೆಡೆ ಗುಡುಗು ಸಿಡಿಲಿನಿಂದೊಡಗೂಡಿ ಧಾರಾಕಾರ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts