More

    ಕುಡಿದ ಮತ್ತಿನಲ್ಲಿ ಸ್ಕೂಟರ್​ನಲ್ಲಿ ಹಿಮ್ಮುಖವಾಗಿ ಕುಳಿತು ಯುವತಿಯ ತುಂಟಾಟ: ವಿಡಿಯೋ ವೈರಲ್​

    ಬೆಂಗಳೂರು: ಪಾನಮತ್ತ ಯುವತಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಹಿಮ್ಮುಖವಾಗಿ ಕುಳಿತು ತುಂಟಾಟ ಮೆರೆದಿದ್ದಲ್ಲದೆ, ಸಂಚಾರ ನಿಯಮವನ್ನು ಉಲ್ಲಂಘಿಸಿದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಸ್ಕೂಟಿಯಲ್ಲಿ ಹಿಮ್ಮುಖವಾಗಿ ಕುಳಿತ ಯುವತಿ ಮತ್ತು ಸ್ಕೂಟರ್​ ಸವಾರಿ ಮಾಡುತ್ತಿದ್ದ ಯುವತಿ ಹೆಲ್ಮೆಟ್​ ಧರಿಸಿದೇ, ಸಿಟಿಯ ಪ್ರಮುಖ‌ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟರ್​ ಚಲಾಯಿಸಿದ್ದಾರೆ.

    ಕೇರಳ ನೋಂದಣಿಯ ಸ್ಕೂಟರ್​ನಲ್ಲಿ ಕೈ-ಕಾಲುಗಳನ್ನು ಆಡಿಸುತ್ತಾ, ಮತ್ತಿನಲ್ಲಿ ಎಂಜಾಯ್​ ಮಾಡುತ್ತಾ, ಅಪಾಯಕಾರಿಯಾಗಿ ಸ್ಕೂಟರ್​ ಚಲಾಯಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶ ಮತ್ತು ನಿಲಾದ್ರಿ ನಗರದಲ್ಲಿ ಇಬ್ಬರು ಓಡಾಡಿದ್ದಾರೆ. ಯುವತಿಯರಿಬ್ಬರ ತುಂಟಾಟವನ್ನು ಸ್ಥಳೀಯರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

    ಭಾರತ್​ ಜೋಡೋ ಯಾತ್ರೆಗೆ ದೀಪಾವಳಿ ಬ್ರೇಕ್: ತೆಲಂಗಾಣದಿಂದ ದೆಹಲಿಗೆ ತೆರಳಿದ ರಾಹುಲ್ ಗಾಂಧಿ

    ಸಚಿವರ ಫೋಟೋ ಇಟ್ಕೊಂಡು ಪೂಜೆ ಮಾಡ್ತೀನಿ: ವಿ. ಸೋಮಣ್ಣರ ಕಪಾಳಮೋಕ್ಷ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಮಹಿಳೆ

    ಚುನಾಯಿತ ಸದಸ್ಯರಿಗೆ ಸಿಕ್ಕಿತು ಬಂಪರ್ ಗಿಫ್ಟ್; ಇದು ಸಚಿವರು ನೀಡಿದ ದೀಪಾವಳಿ ಉಡುಗೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts