More

    ಬೆಂಗಳೂರು ಸಿಟಿಜನ್ ಡ್ಯಾಷ್‍ಬೋರ್ಡ್: ಒಂದೇ ವೇದಿಕೆಯಲ್ಲಿ ನಾಗರಿಕ ಸೌಲಭ್ಯಗಳ ಸಂಪೂರ್ಣ ಮಾಹಿತಿ

    ಬೆಂಗಳೂರು: “ಬೆಂಗಳೂರು ರಾಜಕೀಯ ಕಾರ್ಯ ಸಮಿತಿ-ಬಿಪ್ಯಾಕ್”, ಬೆಂಗಳೂರು ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ “ಬೆಂಗಳೂರು ಸಿಟಿಜನ್ ಡ್ಯಾಷ್‍ಬೋರ್ಡ್” ಪ್ರಾರಂಭಿಸಿದೆ.

    ವಾರ್ಡ್ ಆಡಳಿತ, ಸರ್ಕಾರಿ ಸೇವೆಗಳು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕ ಆಡಳಿತ ಮತ್ತು ನಾಗರಿಕ ಸೌಲಭ್ಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಡ್ಯಾಷ್ ಬೋರ್ಡ್ ಹೊಂದಿರಲಿದೆ. ಬೆಂಗಳೂರಿನ ನಾಗರಿಕರು ಆರಾಮದಾಯಕ ಜೀವನ ಸಾಗಿಸಲು ಇಂತಹ ಮಾಹಿತಿ ತಿಳಿದಿರುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಬಿ.ಪ್ಯಾಕ್‍ನ ಬಿ.ಎಂಗೇಜ್ಡ್ ಕಾರ್ಯಕ್ರಮದ ಅಡಿಯಲ್ಲಿ ಡ್ಯಾಷ್‍ಬೋರ್ಡ್ ರೂಪಿಸಲಾಗಿದೆ.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಹಾಗೂ ಯಶಸ್ವಿಗೊಳಿಸಲು ತಿಳುವಳಿಕೆಯುಳ್ಳ ನಾಗರಿಕರ ಅಗತ್ಯವಿದೆ. ಚುನಾಯಿತ ಪ್ರತಿನಿಧಿಗಳು ಪ್ರಜಾಪ್ರಭುತ್ವ ಶಕ್ತಿ ರಚನೆಯ ನಿರ್ಣಾಯಕ ಅಂಶಗಳಾಗಿದ್ದು, ಜನರು ಸರ್ಕಾರದ ನಿರ್ಧಾರಗಳಲ್ಲಿ ಭಾಗವಹಿಸುವ ಚುನಾಯಿತ ಪ್ರತಿನಿಧಿಗಳ ಕುರಿತು ತಿಳಿದಿರಬೇಕು.

    ಡ್ಯಾಷ್‍ಬೋರ್ಡ್ ಪ್ರವೇಶಕ್ಕೆ ಇಲ್ಲಿ ಕ್ಲಿಕ್ ಮಾಡಿ : Bengaluru Citizen Dashboard

    ಪಾರದರ್ಶಕತೆ, ಸುಲಭವಾಗಿ ಮಾಹಿತಿ ಲಭ್ಯತೆ, ಮತ್ತು ಹೊಣೆಗಾರಿಕೆಗಳು ಯಶಸ್ವಿ ಪ್ರಜಾಪ್ರಭುತ್ವದ ಸೂತ್ರವಾಗಿವೆ. ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಜನರು ಹೆಚ್ಚು ಹೆಚ್ಚು ತಿಳಿದಿದ್ದಾಗ, ಅವರು ಅಸ್ತಿತ್ವದಲ್ಲಿರುವ ಸೇವೆಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಸೂಕ್ತ ಬದಲಾವಣೆಗಳನ್ನು ಸೂಚಿಸಬಹುದು ಮತ್ತು ಹೊಣೆಗಾರಿಕೆಗಳನ್ನು ಖಚಿತಪಡಿಸಿಕೊಳ್ಳಬಹುದು. ಇದು ಸಂವಿಧಾನದ 74 ನೇ ತಿದ್ದುಪಡಿಯ ಮೂಲವಾಗಿದ್ದರೂ ನಾವದನ್ನು ಇಂದಿಗೂ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿ, ನಗರಕ್ಕೆ ಸಂಬಂಧಿಸಿದ ಸ್ಥಳೀಯ ಸರ್ಕಾರದ ಮಾಹಿತಿಗಳು ಆಯಾ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಆದರೆ ಅದನ್ನು ಕಂಡುಹಿಡಿಯುವುದು ಕಷ್ಟಸಾಧ್ಯ. ಆದರೆ ಬೆಂಗಳೂರು ಸಿಟಿಜನ್ ಡ್ಯಾಷ್‍ಬೋರ್ಡ್ ಬಳಕೆದಾರರ ಸ್ನೇಹಿಯಾಗಿದ್ದು, ಬಳಕೆದಾರರಿಗೆ ಉತ್ತಮ ವೇದಿಕೆಯಾಗಿದೆ.

    ಬಿಬಿಎಂಪಿಯ 8 ವಲಯಗಳ 198 ವಾರ್ಡ್‍ಗಳ ಸಂಪೂರ್ಣ ಮಾಹಿತಿ, ಅಂದರೆ ವಾರ್ಡ್‍ಗಳ ಆಯಾ ಕಾರ್ಪೊರೇಟರ್‌ಗಳು, ಶಾಸಕರು ಮತ್ತು ಸಂಸದರ ವಿವರಗಳು ಮತ್ತು ಆಯಾ ವಾರ್ಡ್ / ಕ್ಷೇತ್ರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಡ್ಯಾಷ್‍ಬೋರ್ಡ್ ಹೊಂದಿದೆ. ನೀರಿನ ಬಿಲ್, ವಿದ್ಯುತ್ ಬಿಲ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಪಾವತಿಗಳು, ಸರ್ಕಾರದದ ಪ್ರಮಾಣಪತ್ರಗಳು, ಪಾಸ್‍ಪೋರ್ಟ್ ಇತ್ಯಾದಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಡ್ಯಾಷ್‍ಬೋರ್ಡ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿಯ ಸಹಾಯ, ಸಕಾಲ ಮತ್ತು ಸರ್ಕಾರದ ಸಹಾಯವಾಣಿ ಸಂಖ್ಯೆಗಳು ಮತ್ತು ಕೋವಿಡ್-19 ಫೀವರ್ ಆಸ್ಪತ್ರೆಗಳ ಮಾಹಿತಿಯನ್ನು ಒಳಗೊಂಡಿದೆ. ಅಲ್ಲದೆ, ಎಲ್ಲಾ ಸರ್ಕಾರಿ ಇಲಾಖೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುವ ಪ್ರತ್ಯೇಕ ಟ್ಯಾಬ್ ವ್ಯವಸ್ಥೆಯನ್ನೂ ಒಳಗೊಂಡಿದೆ. ಡ್ಯಾಶ್‌ಬೋರ್ಡ್‌ನಲ್ಲಿರುವ ಮಾಹಿತಿ ವಿವಿಧ ಸರ್ಕಾರಿ ವೆಬ್‌ಸೈಟ್‌ಗಳಿಂದ ಸಂಗ್ರಹಿ ಅತ್ಯಂತ ಸರಳ ಮತ್ತು ಬಳಕೆದಾರರಿಗೆ ಸಹಾಯವಾಗುವಂತ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ.

    ಡ್ಯಾಷ್‍ಬೋರ್ಡ್‍, ನಿರಂತರ ಪ್ರಗತಿಯ ಪ್ರಯತ್ನವಾಗಿದ್ದು, ವಿವಿಧ ಸರ್ಕಾರಿ ಸಂಸ್ಥೆಗಳು ಹಾಗೂ ನಾಗರಿಕ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಲೇ ಇದೆ. ಕಾಲಕಾಲಕ್ಕೆ ಮಾಹಿತಿ ನವೀಕರಿಸಲು ನಾವು ನಾಗರೀಕರ ಸಹಭಾಗಿತ್ವ ಕೋರುತ್ತಿದ್ದು, ಯಾವುದೇ ಸಲಹೆಗಳನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ.

    ಬೆಂಗಳೂರು ಸಿಟಿಜನ್ ಡ್ಯಾಷ್‍ಬೋರ್ಡ್: ಒಂದೇ ವೇದಿಕೆಯಲ್ಲಿ ನಾಗರಿಕ ಸೌಲಭ್ಯಗಳ ಸಂಪೂರ್ಣ ಮಾಹಿತಿನಾಗರಿಕ ಅರಿವು ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿ ಜನರು ಹೆಚ್ಚು ಸಕ್ರಿಯರಾಗಲು ಬೆಂಗಳೂರು ಸಿಟಿಜನ್ ಡ್ಯಾಶ್‌ಬೋರ್ಡ್ ಅನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಾರೆಂದು ನಾವು ಭಾವಿಸುತ್ತೇವೆ. ಅಲ್ಲದೇ ತಮ್ಮ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಲು ಇದರಲ್ಲಿನ ಮಾಹಿತಿಯನ್ನು ಬಳಸಿಕೊಳ‍್ಳುತ್ತಾರೆಂದು ಆಶಿಸುತ್ತಿದ್ದೇವೆ”.

    | ರೇವತಿ ಅಶೋಕ್, ಟ್ರಸ್ಟಿ ಮತ್ತು ಸಿಇಒ, ಬಿ.ಪ್ಯಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts