More

    ಬೆಂಗಳೂರು ಬುಲ್ಸ್​ಗೆ ಆಘಾತ ; ಯು ಮುಂಬಾ ಎದುರು ಮುಗ್ಗರಿಸಿದ ಪವನ್​ ಪಡೆ

    ಬೆಂಗಳೂರು : ಆರಂಭಿಕ ಹಿನ್ನಡೆ ನಡುವೆಯೂ ತಿರುಗೇಟು ನೀಡಲು ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ 2018ರ ಚಾಂಪಿಯನ್​ ಬೆಂಗಳೂರು ಬುಲ್ಸ್​ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಶುಭಾರಂಭ ಕಾಣಲು ವಿಫಲವಾಯಿತು. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ನಿರೀಕ್ಷಿ ನಿರ್ವಹಣೆ ತೋರಲು ವಿಫಲವಾದ ಬುಲ್ಸ್​ ತಂಡ 30-46 ಅಂಕಗಳಿಂದ ಯು ಮುಂಬಾ ಎದುರು ನಿರಾಸೆ ಅನುಭವಿಸಿತು. ವೈಟ್​ಫೀಲ್ಡ್​ನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಲೀಗ್​ಗೆ ಚಾಲನೆ ನೀಡಲಾಯಿತು. ಸ್ಟಾರ್​ ರೈಡರ್​ ಅಭಿಷೇಕ್​ (19 ಅಂಕ) ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಪವನ್​ಗೆ ಕಡಿವಾಣ
    ಬುಲ್ಸ್​ ತಂಡದ ಸ್ಟಾರ್​ ರೈಡರ್​ ಪವನ್​ ಶೇರಾವತ್​ಗೆ (12 ಅಂಕ) ನಿರ್ಣಾಯಕ ಹಂತದಲ್ಲಿ ಮುಂಬೈ ರಣಾತ್ಮಕ ಪಡೆ ಕಡಿವಾಣ ಹಾಕಿತು. ಮೊದಲ ರೈಡಿಂಗ್​ನಲ್ಲೇ ಪವನ್​ಗೆ ಮುಂಬೈ ಆಟಗಾರರ ಬಲೆಹಾಕಿದರು. ಇದರ ಫಲವಾಗಿ ಮುಂಬೈ ತಂಡ 7ನೇ ನಿಮಿಷದಲ್ಲೇ ಬುಲ್ಸ್​ ತಂಡವನ್ನು ಆಲೌಟ್​ ಖೆಡ್ಡಾಗೆ ಬೀಳಿಸಿ 11-5 ರಿಂದ ಮುನ್ನಡೆ ಸಾಧಿಸಿತು. ಬಳಿಕ ಬುಲ್ಸ್​ ತಂಡದ ಚಂದ್ರನ್​ ರಂಜಿತ್​ (13ಅಂಕ) ಭರ್ಜರಿ ರೈಡಿಂಗ್​ ನಡೆಸಿ ಮುಂಬೈ ತಂಡಕ್ಕೆ ತಿರುಗೇಟು ನೀಡುವ ಸೂಚನೆ ನೀಡಿದರು. ಚಂದ್ರನ್​ 12ನೇ ನಿಮಿಷದಲ್ಲಿ 2 ಹಾಗೂ 14ನೇ ನಿಮಿಷದಲ್ಲಿ 3 ಪಾಯಿಂಟ್ಸ್​ ತಂದ ಲವಾಗಿ ಅಂಕಗಳ ಅಂತರವನ್ನು 16-17ಕ್ಕೆ ಇಳಿಸಿದರು. ಈ ವೇಳೆ ಮುಂಬೈ ಅಂಕಣದಲ್ಲಿ ಅಭಿಷೇಕ್​ ಏಕೈಕ ಆಟಗಾರನಾಗಿ ಉಳಿದರು. ರೈಡಿಂಗ್​ಗೆ ಆಗಮಿಸಿದ ಅಭಿಷೇಕ್​ಗೆ ಕಡಿವಾಣ ಹೇರಲು ವಿಫಲವಾದ ಬುಲ್ಸ್​ ತಂಡ ಮೂರು ಅಂಕಬಿಟ್ಟುಕೊಟ್ಟಿತು. ಜತೆಗೆ ಮುಂಬೈ ತಂಡವನ್ನು ಆಲೌಟ್​ ಮಾಡುವ ಅವಕಾಶ ತಪ್ಪಿಸಿಕೊಂಡಿತು. ಮೊದಲಾರ್ಧದ ಕಡೇ ನಿಮಿಷಗಳಲ್ಲಿ ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಬುಲ್ಸ್​ ತಂಡ 17-24 ರಿಂದ ಹಿನ್ನಡೆ ಕಂಡಿತು.

     ಮುಂಬೈ ಅಬ್ಬರದ ಆಟ
    ದ್ವೀತಿಯಾರ್ಧದಲ್ಲೂ ಮುಂಬೈ ಅಬ್ಬರದ ನಿರ್ವಹಣೆ ಮುಂದುವರಿಸಿದರೆ ಬುಲ್ಸ್​ ತಂಡ ಕನಿಷ್ಠ ಪುಟಿದೇಳಲು ವಿಲವಾಯಿತು. ಇಬ್ಬರು ಆಟಗಾರರೊಂದಿಗೆ ದ್ವೀತಿಯಾರ್ಧ ಆರಂಭಿಸಿದ ಬುಲ್ಸ್​ ತಂಡ 22ನೇ ನಿಮಿಷದಲ್ಲೇ ಎರಡನೇ ಬಾರಿ ಆಲೌಟ್​ ಆಯಿತು. ಬಳಿಕ ಮುಂಬೈ ತಂಡದ ಅಬ್ಬರದ ಎದುರು ಬುಲ್ಸ್​ ತಂಡ ಕನಿಷ್ಠ ಚೇತರಿಕೆ ಕಾಣಲು ವಿಫಲವಾಯಿತು. 38ನೇ ನಿಮಿಷದಲ್ಲಿ ಮೂರನೇ ಬಾರಿಗೆ ಬುಲ್ಸ್​ ತಂಡವನ್ನು ಆಲೌಟ್​ ಮಾಡಿದ ಮುಂಬೈ ತಂಡ ಗೆಲುವಿನ ಅಂತರ ಹಿಗ್ಗಿಸಿಕೊಂಡಿತು. ಅಭಿಷೇಕ್​ ಸಿಂಗ್​ ಆಕರ್ಷಕ ರೈಡಿಂಗ್​ ಮೂಲಕ ಗಮನಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts