More

    “ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

    ಕೊಲ್ಕತಾ : ಪಶ್ಚಿಮ ಬಂಗಾಳದ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ನಂದಿಗ್ರಾಮದಲ್ಲಿ ಏಟು ಬಿದ್ದ ಬಗ್ಗೆ ಹಲವು ಚರ್ಚೆಗಳು ನಡೆದವು. ಬ್ಯಾನರ್ಜಿ ಅವರು ತಮ್ಮನ್ನು ನಾಲ್ಕೈದು ಜನ ತಳ್ಳಿ ಗಾಯಗೊಳಿಸಿದ್ದು, ತಮ್ಮ ಮೇಲೆ ಸಂಚು ನಡೆದಿದೆ ಎಂದು ಬಿಜೆಪಿಯತ್ತ ಬೆಟ್ಟು ಮಾಡಿದ್ದರು. ಅದೇ ಬಿಜೆಪಿ ದೀದಿಯದ್ದು ನಾಟಕ ಎಂದಿತ್ತು. ಕೊನೆಗೆ ಚುನಾವಣಾ ಆಯೋಗ ಪೆಟ್ಟು ಬಿದ್ದಿದ್ದು ಆ್ಯಕ್ಸಿಡೆಂಟ್​ ಎಂದು ತನ್ನ ನಿರ್ಧಾರ ಮಂಡಿಸಿದ್ದಾಯಿತು.

    ಆದರೆ ಈ ವಿಷಯ ಅಷ್ಟು ಬೇಗ ಮರೆಯಾಗುವಂಥದ್ದಲ್ಲ. ದೀದಿ ವೀಲ್​ಚೇರ್​ನಲ್ಲಿ ಕೂತು ಚುನಾವಣಾ ಪ್ರಚಾರ ನಡೆಸುತ್ತಿದ್ದರೆ, ಅವರ ವಿರೋಧಿಗಳಿಗೆ ಅವರನ್ನು ಆಡಿಕೊಳ್ಳಲು ಒಳ್ಳೆಯ ಅವಕಾಶ ಸೃಷ್ಟಿಯಾಗಿದೆ. ಇದೇ ಕೆಲಸವನ್ನು ಬಿಜೆಪಿಯ ಸ್ಟಾರ್ ಕಾಂಪೇನರ್ ಆದ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಡಿದ್ದಾರೆ.

    ಇದನ್ನೂ ಓದಿ: “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

    ಬಂಗಾಳದ ರಾಣಿಬಂದ್​ನಲ್ಲಿ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ ಅಮಿತ್ ಷಾ, ತಮ್ಮ ಭಾಷಣವನ್ನು ಆರಂಭಿಸಿದ್ದು ಹೀಗೆ – “ನಾನಿವತ್ತು ಸ್ವಲ್ಪ ತಡವಾಗಿ ಬಂದೆ. ಏಕೆಂದರೆ ನನ್ನ ಹೆಲಿಕಾಪ್ಟರ್​ನಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಆದರೆ ನಾನಿದನ್ನು ಸಂಚು ಎಂದು ಕರೆಯುವುದಿಲ್ಲ!” ಮಮತಾ ಬ್ಯಾನರ್ಜಿ ಕಾಲ ಮೇಲೆ ಕಾರು ಬಾಗಿಲು ಹಾಕಿಕೊಂಡು ಗಾಯವಾಗಿದೆ ಎಂದು ಅಧಿಕೃತ ವರದಿ ಬಂದ ಹಿನ್ನೆಲೆಯಲ್ಲಿ, ಬ್ಯಾನರ್ಜಿ ಅದನ್ನು ಸಂಚು ಎಂದು ಆರೋಪಿಸಿದ್ದನ್ನು ಷಾ, ಹೀಗೆ ವ್ಯಂಗ್ಯವಾಡಿದ್ದಾರೆ.

    ಮಾತು ಮುಂದುವರಿಸಿದ ಷಾ, ಮಮತಾ ಜಿ ಕಾಲಿಗೆ ಏಟು ಬಿದ್ದಿದೆ. ಅದು ಹೇಗಾಯಿತು ಗೊತ್ತಿಲ್ಲ. ಟಿಎಂಸಿ ಅದನ್ನು ಸಂಚು ಎನ್ನುತ್ತದೆ, ಆದರೆ, ಚುನಾವಣಾ ಆಯೋಗ ಅದು ಆ್ಯಕ್ಸಿಡೆಂಟ್ ಆಗಿತ್ತು ಎನ್ನುತ್ತದೆ ಎಂದರು. ಜೊತೆಗೆ, “ದೀದಿ, ನಿಮ್ಮ ಕಾಲಿನ ಬಗೆಗಿನ ಕಾಳಜಿಯಿಂದ ನೀವು ವೀಲ್​ಚೇರ್​ನಲ್ಲಿ ಓಡಾಡುತ್ತಿದ್ದೀರಿ. ಆದರೆ ಕೊಲೆಯಾದ ನನ್ನ 130 ಕಾರ್ಯಕರ್ತರ ತಾಯಂದಿರ ನೋವಿನ ಬಗ್ಗೆ ನಿಮಗೆ ಕಾಳಜಿ ಇಲ್ಲ” ಎಂದು ಷಾ ವಾಕ್​ಪ್ರಹಾರ ನಡೆಸಿದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಂಸದರ ಮನೆಯ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಸೊಸೆ… ಪ್ರೇಮಕಥೆಗೆ ಸ್ಫೋಟಕ ತಿರುವು !

    ಕೊಯಂಬತೂರ್ ದಕ್ಷಿಣ ಕ್ಷೇತ್ರಕ್ಕೆ ಕಮಲ್ ಹಾಸನ್ ನಾಮಪತ್ರ

    ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts