More

  ವಿಮ್ಸ್ ಆಸ್ಪತ್ರೆಯಲ್ಲಿಲ್ಲ ಮಾನವೀಯತೆ; ರೋಗಗ್ರಸ್ಥ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆಯ ಕಂಡು ಮರುಗಿದ ಸಾರ್ವಜನಿಕರು!

  ಬಳ್ಳಾರಿ: ವಿಜಯನಗರ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ.

  ಸಿರುಗುಪ್ಪ ತಾಲೂಕಿನ ಶಾನವಾಸಪುರದ ಮಾಬಾಷಾ ಎಂಬುವರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿದ್ದ ಮಗಳು ಶ್ರೀಂಥಾಜ್​ಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಆಂಬುಲೆನ್ಸ್​ನಲ್ಲಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು‌ ಬಂದಾಗ, ಆ ವಾಹನವು ತುರ್ತು ನಿಗಾಘಟಕಕ್ಕೆ ಇಳಿಸಿ ಮುಂದೆ ಹೋಗಿದೆ.

  ತಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ, ನೀನು ಬೇರೊಂದು ಘಟಕಕ್ಕೆ ತೆರಳುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದಾರೆ.‌

  ಮಗಳಿಗೆ ಏನಾದ್ರೂ ಅವಘಡ ಸಂಭವಿಸುತ್ತೆ ಎಂಬ ಭಯಗೊಂಡ ತಂದೆ ವ್ಹೀಲ್ ಚೇರ್ ನೀಡುವಂತೆ ಕೋರಿದ್ದಾರೆ. ‌ಇದು ನಮ್ಮ ಘಟಕದ್ದು. ನೀನು‌ ಹೋಗುವ ಘಟಕಕ್ಕೆ ಮಾಹಿತಿ‌ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ಸಿಬ್ಬಂದಿ ಅಲ್ಲಿದ್ದ ರೋಗಿಯ ತಂದೆಗೆ ತಾಕೀತು‌ ಮಾಡಿದ್ದಾರೆ.

  ಆಗ ತಾನೇ ಹೆಗಲ‌ ಮೇಲೆ ಹೊತ್ತು ಕೊಂಡು ಹೋಗುವುದಾಗಿ ತಿಳಿಸಿ, ಮಗಳನ್ನ‌ ತನ್ನ‌ ಹೆಗಲಮೇಲೆ ಹೊತ್ತು ಆಸ್ಪತ್ರೆಯ ಸಾರ್ವಜನಿಕ ಸ್ಥಳದಲ್ಲೇ ಸಾಗಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಜನರು ಛೀಮಾರಿ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts