More

    ಅಗತ್ಯ ಔಷಧ ತಕ್ಷಣ ಖರೀದಿಸಿ: ಅಧಿಕಾರಿಗಳಿಗೆ ಸಚಿವ ಆನಂದ ಸಿಂಗ್ ಸೂಚನೆ

    ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಔಷಧದ ಕೊರತೆಯಾಗಬಾರದು. ರೆಮ್‌ಡೆಸಿವಿರ್ ಸೇರಿ ಅಗತ್ಯ ಔಷಧಗಳನ್ನು ತಕ್ಷಣ ಖರೀದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಟ್ರಾಮಾಕೇರ್ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ವಿಮ್ಸ್ ಬಳಿಯ ನ್ಯೂ ಡೆಂಟಲ್ ಕಾಲೇಜಿನಲ್ಲಿ 140 ಆಕ್ಸಿಜನ್ ಬೆಡ್ ವ್ಯವಸ್ಥೆ ಜತೆಗೆ 6 ಕೆಎಲ್ ಆಕ್ಸಿಜನ್ ಟ್ಯಾಂಕ್ ಕೂಡ ಅಳವಡಿಸಲಾಗಿದೆ. ಇನ್ನೆರಡ್ಮೂರು ದಿನಗಳಲ್ಲಿ ಕಾರ್ಯಾರಂಭವಾಗಲಿದೆ. ಇದರಿಂದ ಟ್ರಯಾಜ್‌ನಲ್ಲಿ ಅನೇಕ ದಿನಗಳಿಂದ ಐಸಿಯು ಬೆಡ್ ಅಗತ್ಯ ಇರುವವರಿಗೆ ಸಹಕಾರಿಯಾಗಲಿದೆ ಎಂದರು.

    ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ 25 ವೆಂಟಿಲೇಟರ್ ಅಳವಡಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಮಂಗಳೂರಿನಿಂದ ದಾನಿಗಳು ಅಗತ್ಯ ಬೆಡ್ ಹಾಗೂ 8 ವೆಂಟಿಲೇಟರ್ ನೀಡಲು ಮುಂದೆ ಬಂದಿದ್ದಾರೆ. ಇವುಗಳಿಂದ ನಮ್ಮ ಬೆಡ್ ಕೊರತೆ ಸಮಸ್ಯೆ ನೀಗಲಿದೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

    ಗಂಭೀರ ಕೇಸ್ ಮಾತ್ರ ದಾಖಲು: ಜಿಲ್ಲೆಯ ವಿವಿಧೆಡೆ ಆಕ್ಸಿಜನ್ ಬೆಡ್‌ನಲ್ಲಿರುವ ಗಂಭೀರ ಪ್ರಕರಣಗಳನ್ನು ಟ್ರಾಮಾಕೇರ್ ಹಾಗೂ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದರು. ಹೊಸ ಸೊಂಕಿತರಿಗೆ ಆಕ್ಸಿಜನ್ ಬೆಡ್ ಅವಶ್ಯವಿದ್ದರೆ ನ್ಯೂ ಡೆಂಟಲ್ ಕಾಲೇಜಿನಲ್ಲಿ ಸ್ಥಾಪಿಸಲಾಗುತ್ತಿರುವ 140 ಆಕ್ಸಿಜನ್ ಬೆಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದರು. ಅಗತ್ಯ ಸಿಬ್ಬಂದಿಯನ್ನು ತಕ್ಷಣ ಪ್ರಕಟಣೆ ನೀಡಿ ನೇಮಕ ಮಾಡಿಕೊಳ್ಳಿ ಎಂದು ವಿಮ್ಸ್ ನಿರ್ದೇಶಕರಿಗೆ ಡಿಸಿ ಮಾಲಪಾಟಿ ಸೂಚಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಟ್ರಾಮಾಕೇರ್ ನೋಡಲ್ ಅಧಿಕಾರಿ ಶ್ರೀನಿವಾಸಲು, ಡಾ.ಇಂದ್ರಾಣಿ, ಡಾ.ಕಿರಣಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts