ಬಳ್ಳಾರಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಬಕಾರಿ ಉದ್ಯಮ ಉಳಿಸಿ ಅಭಿಯನಾದನ್ವಯ ಮಂಗಳವಾರ ಡಿಸಿ ಕಚೇರಿ ಎದುರು ಫೆಡರೇಶನ್ ಆಫ್ ಮರ್ಚೆಂಟ್ ಅಸೋಸಿಯೇಷನ್ ಕರ್ನಾಟಕ ಹಾಗೂ ಬಳ್ಳಾರಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಆಶ್ರಯದಲ್ಲಿ ಮದ್ಯ ಮಾರಾಟಗಾರರು ಮಂಗಳವಾರ ಧರಣಿ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಸತೀಶ್‌ಬಾಬು ಮಾತನಾಡಿ, ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಪ್ರಸ್ತಾವನೆ ಕೈಬಿಡಬೇಕು, 2011ರ ಜನಗಣತಿ ಅನ್ವಯ 5000 ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಿ.ಎಲ್-6ಎ ಮತ್ತು ಸಿ.ಎಲ್ 7 ಸನ್ನದುಗಳನ್ನು ಪ್ರಾರಂಭಿಸಲು ನೀಡಿರುವ ಆದೇಶ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ನವೀಕರಿಸದೆ ಸ್ಥಗಿತಗೊಂಡ ಸನ್ನದುಗಳನ್ನು ಎಂ.ಎಸ್.ಐ.ಎಲ್‌ಗೆ ಮಂಜೂರಾತಿ ಮಾಡಬಾರದು. ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕ ಕೈಬಿಡುವಂತೆ ಅಲ್ಲದೆ ಅಧಿಕಾರಿಗಳು ವಸೂಲಿಗಾಗಿ ಕಿರುಕುಳ ನೀಡುತ್ತಿದ್ದು, ಅವರ ವಿರುದ್ಧ ಕ್ರಮಜರುಗಿಸಬೇಕೆಂದು ಒತ್ತಾಯಿಸಿದರು.
ಅಪಾರ ಜಿಲ್ಲಾಧಿಕಾರಿ ಮಂಜುನಾಥ್‌ಗೆ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿಗಳಾದ ಪಿ.ಲಕ್ಷ್ಮರೆಡ್ಡಿ, ಸದಸ್ಯರಾದ ಗುರುಮೂರ್ತಿ, ಸತೀಶ್‌ಶೆಟ್ಟಿ, ಶಾಂತರಾಮ್‌ಶೆಟ್ಟಿ, ಗುರುಪ್ರಸಾದ್, ಶ್ರೀಮನ್ನಾನಾರಯಣ, ವಿಜಯಕುಮಾರ್, ಮಂಜುನಾಥ್, ಆಂಜಿನೇಯ್ಯ ಇದ್ದರು.