More

    ಕನ್ನಡ ಪರೀಕ್ಷೆಯಲ್ಲಿ ಹಿಂದಿ ಪ್ರಶ್ನೆಗಳು: ಎನ್‌ಇಟಿ ಅಭ್ಯರ್ಥಿಗಳು ಕಕ್ಕಾಬಿಕ್ಕಿ; ಹೆಚ್ಚುವರಿ ಅವಧಿ ನೀಡಿ ಗೊಂದಲ ನಿವಾರಣೆಗೆ ಯತ್ನ


    ಬಳ್ಳಾರಿ: ಯುಜಿಸಿ ನಡೆಸಿದ ಎನ್‌ಇಟಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಗಳ ಬದಲಿಗೆ ಶೇ.90 ಹಿಂದಿ ಪ್ರಶ್ನೆಗಳನ್ನು ಭಾನುವಾರ ಕೇಳಿದ್ದರಿಂದ ಅಭ್ಯರ್ಥಿಗಳು ಕಕ್ಕಾಬಿಕ್ಕಿಯಾಗಿದ್ದರು. ಬಳ್ಳಾರಿ ನಗರದ ಎರಡು ಸೆಂಟರ್‌ಗಳಲ್ಲಿ ಪರೀಕ್ಷೆ ನಡೆದಿದೆ.

    ಆದರೆ, ಈ ಗೊಂದಲದಿಂದಾಗಿ ಹೆಚ್ಚುವರಿ ಅವಧಿ ನೀಡಿ, ಪ್ರಶ್ನೆಗಳ ಬದಲಾವಣೆ ಮಾಡಿ ಕೊಡಲಾಯಿತು. ಮಧ್ಯಾಹ್ನ 12ಕ್ಕೆ ಮುಗಿಯ ಬೇಕಾಗಿದ್ದ ಪರೀಕ್ಷೆ 1.30ರವರೆಗೆ ನಡೆದಿದೆ. ಒಂದು ಪೇಪರ್ ಸಾಮಾನ್ಯ ಜ್ಞಾನ (ಇಂಗ್ಲಿಷ್/ ಹಿಂದಿ) ಮತ್ತು ಒಂದು ಪೇಪರ್ ಕನ್ನಡವಿತ್ತು. ಆದರೆ, ಕನ್ನಡದಲ್ಲಿ 10 ಪ್ರಶ್ನೆಗಳನ್ನು ಮಾತ್ರ ಕನ್ನಡದಲ್ಲಿ ಕೇಳಲಾಗಿದ್ದು, ಶೇ.90 ಪ್ರಶ್ನೆಗಳು ಹಿಂದಿಯಲ್ಲಿ ಕೇಳಲಾಗಿದೆ. ಸ್ನಾತಕೋತ್ತರ ಪದವಿ ಓದುವ ಹಾಗೂ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದು. ಒಟ್ಟು ಎರಡು ಪ್ರಶ್ನೆಪತ್ರಿಕೆಯ 150 ಪ್ರಶ್ನೆಯಲ್ಲಿ 50 ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಬಿಟ್ಟು, ಇನ್ನುಳಿದ ಕನ್ನಡ ವಿಷಯದ 100 ಪ್ರಶ್ನೆಗಳಲ್ಲಿ ಮೊದಲ 10 ಪ್ರಶ್ನೆಗಳು ಕನ್ನಡದಲ್ಲಿ ಬಂದಿವೆ. ಉಳಿದ ಪ್ರಶ್ನೆಗಳು ಹಿಂದಿಯಲ್ಲಿದ್ದವು.

    ಪತ್ರಿಕೆ ಬದಲಾವಣೆ ಮಾಡಿಕೊಟ್ಟರೂ ಗೊಂದಲ ಮುಂದುವರಿದಿದ್ದು, ಕೆಲ ಪ್ರಶ್ನೆಗಳು ಪುನರಾವರ್ತನೆ ಆಗಿರುವುದು ಕಂಡು ಬಂದಿದೆ. ಇದಲ್ಲದೆ, ಸರ್ವರ್ ಸಮಸ್ಯೆಯಿಂದ ಹಲವು ವಿದ್ಯಾರ್ಥಿಗಳು ಫೈನಲ್ ಸಬ್ಮಿಷನ್ ತೆಗೆದುಕೊಂಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts