More

    ಸುಸ್ಥಿರ ಗಣಿಗಾರಿಕೆಯಲ್ಲಿ ಉದ್ಯಮದ ಪ್ರಮುಖ ಪಾತ್ರ; ಮೈನ್ಸ್ ನಿಯಂತ್ರಕ ವಿ.ಜಯಕೃಷ್ಣಬಾಬು ಪ್ರತಿಪಾದನೆ

    ಬಳ್ಳಾರಿ: ಪರಿಸರ ಮತ್ತು ಸಮುದಾಯ ಸ್ನೇಹಿ ಸುಸ್ಥಿರ ಗಣಿಗಾರಿಕೆ ಮಾಡುವಲ್ಲಿ ಗಣಿ ಉದ್ಯಮವು ಪ್ರಮುಖ ಪಾತ್ರವಹಿಸಿದೆ ಎಂದು ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ನ ಗಣಿಗಳ ನಿಯಂತ್ರಕ ವಿ.ಜಯಕೃಷ್ಣ ಬಾಬು ಹೇಳಿದರು.

    ಸಂಡೂರು ತಾಲೂಕಿನ ಜಿಂದಾಲ್‌ನಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್‌ನ ವಿಜಯನಗರ ಘಟಕ ಮತ್ತು ಗಣಿ ಪರಿಸರ ಮತ್ತು ಖನಿಜ ಸಂರಕ್ಷಣಾ ಸಂಘ ಹಾಗೂ ಭಾರತೀಯ ಗಣಿ ಬ್ಯೂರೋ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ 20ನೇ ಗಣಿ ಪರಿಸರ ಮತ್ತು ಖನಿಜ ಸಂರಕ್ಷಣಾ ಸಪ್ತಾಹ 2021-22ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಖನಿಜ ಸಂಪನ್ಮೂಲಗಳನ್ನು ವ್ಯವಸ್ಥಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಅವುಗಳ ದೀರ್ಘಾವಧಿಯ ಸುಸ್ಥಿರತೆಗಾಗಿ ಸಾಕಷ್ಟು ಮತ್ತು ಸ್ವೀಕಾರಾರ್ಹ ಕ್ರಮಗಳೊಂದಿಗೆ ಬಳಸಿಕೊಳ್ಳಬೇಕು ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

    ಜೆಎಸ್‌ಡಬ್ಲ್ಯು ಸ್ಟೀಲ್ ವಿಜಯನಗರ ವರ್ಕ್ಸ್ ಅಧ್ಯಕ್ಷ ಪಿ.ಕೆ.ಮುರುಗನ್ ಮಾತಮಾಡಿ, ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತ, ಸ್ವಚ್ಛ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು, ಉಕ್ಕಿನ ತಯಾರಿಕೆಯ ಪ್ರಕ್ರಿಯೆಯಲ್ಲಿ ಖನಿಜ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡಲು ಜೆಎಸ್‌ಡಬ್ಲ್ಯೂ ಬದ್ಧವಾಗಿದೆ ಎಂದರು.

    ಗಣಿಗಳ ಪ್ರಾದೇಶಿಕ ನಿಯಂತ್ರಕ ಸುರೇಶ್ ಪ್ರಸಾದ್ ಮಾತನಾಡಿ, ಕೋವಿಡ್-19ರ ಹೊರತಾಗಿಯೂ, ಕರ್ನಾಟಕ ಗಣಿಗಳು ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡಿವೆ. ಹಣಕಾಸು ವರ್ಷ 2020-21ಕ್ಕೆ ಹೋಲಿಸಿದರೆ ಸುಮಾರು ಶೇ.16 ಇದೆ. ವಿಶ್ವದ ಪ್ರಮುಖ ದೇಶಗಳು ಗಣಿಗಾರಿಕೆ ವಲಯದಲ್ಲಿ ತಮ್ಮ ಜಿಡಿಪಿಯ ಶೇ. 6-7 ಕೊಡುಗೆ ನೀಡಿವೆ. ಆದ್ದರಿಂದ, ಭಾರತೀಯ ಗಣಿಗಾರಿಕೆ ಉದ್ಯಮದಲ್ಲಿ ಸುಧಾರಣೆಗೆ ದೊಡ್ಡ ಅವಕಾಶವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts