More

    ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಸುವಂತೆ ಎಐಡಿಎಸ್‌ಒ ಸಂಘಟನೆ ಒತ್ತಾಯ

    ಬಳ್ಳಾರಿ: ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲು ಆಗ್ರಹಿಸಿ ನಗರದ ಎಸ್ಸಿ, ಎಸ್ಟಿ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗಳ ಎದುರು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

    ಎಐಡಿಎಸ್‌ಒ ಜಿಲ್ಲಾಧ್ಯಕ್ಷ ರವಿಕಿರಣ್.ಜೆ.ಪಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದಾಗಿ ಈ ಮೊದಲು ಶುಲ್ಕ ವಿನಾಯಿತಿ ಜಾರಿಗೆ ತಂದಿದ್ದರು. ಇದು ಅತ್ಯಂತ ಕಡಿಮೆ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವ ವ್ಯವಸ್ಥೆಯಾಗಿದೆ. ಇನ್ನುಳಿದ ಶುಲ್ಕವನ್ನು ಇಲಾಖೆಯಿಂದ ಕಾಲೇಜಿನ ಖಾತೆಗೆ ಪಾವತಿಸಲಾಗುತ್ತಿತ್ತು. ಇದರಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಿಂದ ರಾಜ್ಯ ವಿದ್ಯಾರ್ಥಿಗಳ ಪೋರ್ಟಲ್(ಎಸ್‌ಎಸ್‌ಪಿ) ಜಾರಿಗೆ ಬಂದಾಗಿನಿಂದ ಕಾಲೇಜುಗಳಿಗೆ ಬಾಕಿ ಶುಲ್ಕ ಪಾವತಿಯಾಗದೆ ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕವನ್ನು ಪಡೆಯಲು ಕಾಲೇಜುಗಳು ಮುಂದಾಗಿವೆ ಎಂದು ಆರೋಪಿಸಿ, ಇಂತಹ ಗೊಂದಲಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು.

    ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ಹಿಂದುಳಿದ ಭಾಗದ ಬಡ ಪ್ರತಿ ವಿದ್ಯಾರ್ಥಿಗಳಿಂದ 5000 ರೂ. ಪ್ರವೇಶ ಶುಲ್ಕವನ್ನು ಕಾಲೇಜುಗಳಿಂದ ಸಂಗ್ರಹಿಸಲಾಗುತ್ತಿದೆ. ಸರ್ಕಾರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ, ಕೆ.ಈರಣ್ಣ, ಸೆಕ್ರೆಟರಿಯೇಟ್ ಸದಸ್ಯರಾದ ಎಂ.ಶಾಂತಿ, ಸಿದ್ದು, ನಿಹಾರಿಕ, ಪ್ರಮೋದ್, ಉಮಾ ಮತ್ತು ವಿದ್ಯಾರ್ಥಿಗಳಾದ ಅದಿ, ಸಿದ್ದಯ್ಯ, ಚಂದ್ರ, ಧರ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts