More

    ಅನಗತ್ಯ ಹೊರಬಂದವರಿಗೆ ಬೆತ್ತದ ರುಚಿ ತೋರಿಸಿದ ಸಿಪಿಐ ಗಾಯಿತ್ರಿ, ಸಿಬ್ಬಂದಿ

    ಬಳ್ಳಾರಿ: ನಗರದಲ್ಲಿ ಕರೊನಾ ನಿಯಂತ್ರಣಕ್ಕೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

    ಮನೆಯಿಂದ ಹೊರಬಾರದಂತೆ ಎಷ್ಟೇ ಹೇಳಿದರೂ ಅನಗತ್ಯವಾಗಿ ಓಡಾಡುವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ನಡುವೆ ಸರ್ಕಾರ ಪೊಲೀಸರಿಗೆ ಲಾಠಿ ಬಿಡುವಂತೆ ಸೂಚಿಸಿದ್ದು, ಸಾರ್ವಜನಿಕರನ್ನು ನಿಯಂತ್ರಿಸಲು ಇಲಾಖೆಗೆ ದಿಕ್ಕು ತೋಚದಂತಾಗಿದೆ. ವಿಧಿಯಿಲ್ಲದೆ ಭಾನುವಾರ ಸಿಪಿಐ ಗಾಯಿತ್ರಿ ಹಾಗೂ ಸಿಬ್ಬಂದಿ, ನಗರದ ರಾಯಲ್ ವೃತ್ತದಲ್ಲಿ ಅನಗತ್ಯವಾಗಿ ಹೊರಗಡೆ ಬಂದವರಿಗೆ ಬೆತ್ತದ ರುಚಿ ತೋರಿಸಿದರು. ಅಲ್ಲದೆ ನಗರದ ಕೌಲ್ ಬಜಾರ್ ಮಟನ್ ಮಾರ್ಕೆಟ್‌ನಲ್ಲಿ ಜನಜಂಗುಳಿ ಕಂಡು ಬಂತು.

    9,202 ಜನರ ಸ್ಕ್ರೀನಿಂಗ್: ಜಿಲ್ಲೆಯಲ್ಲಿ ಭಾನುವಾರ 9,202 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು, 6 ಜನರ ರಕ್ತ ಮಾದರಿಯನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಈವರೆಗೆ 42 ಜನರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 33 ನೆಗಟಿವ್ ಬಂದಿದೆ. ಇನ್ನು 9 ಜನರ ವರದಿ ಬರಬೇಕಿದೆ. 252 ಜನರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. 9 ಜನರನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗಿದೆ ಎಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts