More

    ಶೇಖರ್ ಮಾಸ್ತರ್, ಗೌರಿದತ್ತುಗೆ ಪುರಸ್ಕಾರ

    ಬಳ್ಳಾರಿ: ಕಳೆದ ಹಲವು ವರ್ಷಗಳಿಂದ ರಂಗತೋರಣ ಸಂಸ್ಥೆ ಕೊಡಮಾಡುವ ಪ್ರತಿಷ್ಠಿತ ‘ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡ’ ಪುರಸ್ಕಾರಕ್ಕೆ ರಂಗಭೂಮಿ ಕಲಾವಿದ ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ್ ಮತ್ತು ಬೆಂಗಳೂರಿನ ಗೌರಿದತ್ತು ಭಾಜನರಾಗಿದ್ದಾರೆ ಎಂದು ರಂಗತೋರಣ ಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಪಗಲ್ಲು ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೋಳದರಾಶಿಯ ರಾಮೇಶ ಟ್ರಸ್ಟ್, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಸಹಕಾರದಿಂದ ನಗರದ ರಂಗೋತೋರಣ ಸಂಸ್ಥೆಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ದಿಗ್ಗಜರಿಗೆ 2016 ರಿಂದ ಪುರಸ್ಕಾರ ಪ್ರದಾನ ಮಾಡುತ್ತ ಬರಲಾಗಿದೆ. ಕೋವಿಡ್‌ನಿಂದ ಕಳೆದ ಎರಡು ವರ್ಷ ಪ್ರದಾನ ಮಾಡಿರಲಿಲ್ಲ. ಈಗ 2020ರ ಪುರಸ್ಕಾರವನ್ನು ಎಲ್.ಬಿ.ಶೇಖ್ ಮಾಸ್ತರ್ ಮತ್ತು 2021ರ ಪುರಸ್ಕಾರವನ್ನು ಗೌರಿದತ್ತು ಅವರಿಗೆ ನೀಡಲಾಗುತ್ತಿದೆ. ಡಿ.25 ರಂದು ನಗರದ ಸಾಂಸ್ಕೃತಿಕ ಸಮುಚ್ಚಯದ ಸುಭದ್ರಮ್ಮ ಮನ್ಸೂರು ಬಯಲು ರಂಗ ಮಂದಿರದಲ್ಲಿ ಸಂಜೆ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

    ಸಮಾರಂಭದ ಸಾನ್ನಿಧ್ಯವನ್ನು ಸಂಡೂರಿನ ವಿರಕ್ತಮಠದ ಪ್ರಭುಸ್ವಾಮಿ ವಹಿಸಲಿದ್ದಾರೆ. ಕಲಬುರಗಿಯ ಹಿರಿಯ ಮುತ್ಸದ್ದಿ ಬಸವರಾಜ್ ಪಾಟೀಲ್ ಸೇಡಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಹೊಂದಿರಲಿದೆ. ಎಡಿಸಿ ಪಿ.ಎಸ್.ಮಂಜುನಾಥ, ಕಲಾವಿದ ಮದಿರೆ ಮರಿಸ್ವಾಮಿ, ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ, ಜೋಳದರಾಶಿ ಪಂಪನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಸಂಸ್ಥೆಯ ಜೋಳದರಾಶಿ ಪಂಪನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts