More

    ವಶಪಡಿಸಿಕೊಂಡ ಜಮೀನಲ್ಲಿ ಕೈಗಾರಿಕೆ ಸ್ಥಾಪಿಸಲಿ: ರೈತ ಮುಖಂಡರ ಆಗ್ರಹ

    ಬಳ್ಳಾರಿ: ತಾಲೂಕಿನ ಕುಡತಿನಿ ಸುತ್ತ ಕೈಗಾರಿಕೆಗಳ ಸ್ಥಾಪನೆಗೆ ಕಡಿಮೆ ಬೆಲೆಯಲ್ಲಿ ಜಮೀನು ವಶ ಪಡಿಸಿಕೊಂಡ ಕಂಪನಿಗಳು ಕೈಗಾರಿಕೆ ಆರಂಭಿಸದ ಕಾರಣ ನಮ್ಮ ಭೂಮಿ ನಮಗೆ ಕೊಡಿ, ಇಲ್ಲವಾದರೆ ಮಾಸಿಕ 10 ಸಾವಿರ ರೂ.ಉದ್ಯೋಗದ ಪರಿಹಾರ ಕೊಡಿ ಎಂದು ಸಿಪಿಐಎಂ ಮುಖಂಡ ಯು.ಬಸವರಾಜ್ ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಈ ವಿಷಯವನ್ನು ಮುಂದಿಟ್ಟುಕೊಂಡು ಡಿ.1 ರಂದು ಬೈಕ್ ರ‌್ಯಾಲಿ ಮತ್ತು ಡಿ.7 ಕ್ಕೆ ಕುಡತಿನಿಯಿಂದ ಜಿಲ್ಲಾಕೇಂದ್ರಕ್ಕೆ ಪಾದಯಾತ್ರೆ ಮಾಡಲಿದ್ದೇವೆ. 2010ರಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲೆಂದು ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದಾರೆ. 12 ವರ್ಷ ಕಳೆದರೂ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಸರ್ಕಾರವನ್ನು ಎಚ್ಚರಿಸಲು ಈ ಪಾದಯಾತ್ರೆ, ಬೈಕ್ ರ‌್ಯಾಲಿ ಹೋರಾಟ ನಡೆಸುತ್ತಿರುವುದಾಗಿ ಹೇಳಿದರು. ಮುಖಂಡರಾದ ಜೆ.ಸತ್ಯಬಾಬು, ಶಿವಶಂಕರ್, ಪೋಲಪ್ಪ, ವಿರೂಪಾಕ್ಷಪ್ಪ, ಜಂಗ್ಲಿಸಾಬ್, ಗಂಗಾಧರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts