More

    ಕಳಪೆ ಊಟಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳ ಆಕ್ರೋಶ; ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ ಡಿಸಿ ಭೇಟಿ

    ಬಳ್ಳಾರಿ : ನಗರದ ಕೌಲ್ ಬಜಾರ್‌ನಲ್ಲಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳು ಕಳಪೆ ಊಟ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ, ಡಿಸಿ ಪವನ್ ಕುಮಾರ್ ಮಾಲಪಾಟಿ ಅವರ ಬಳಿ ಈ ಬಗ್ಗೆ ನೋವು ತೋಡಿಕೊಂಡರು. ಸಮಸ್ಯೆ ಆಲಿಸಿದ ಡಿಸಿ, ಹಾಸ್ಟೆಲ್‌ನಲ್ಲಿ ಮತ್ತೊಮ್ಮೆ ಯಾವುದೇ ಸಮಸ್ಯೆ ಮಾಡಿಕೊಳ್ಳದಂತೆ ವಾರ್ಡನ್ ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಿ ಕಳುಹಿಸಿದರು. ಪ್ರಮುಖ ವಿದ್ಯಾರ್ಥಿಗಳಾದ ಎಂ.ದೇವರಾಜ, ನಾಗೇಂದ್ರ, ಕನಕ ವಿ., ಮಹಾಂತೇಶ ಕೆ., ಪಾಂಡುರಂಗಪ್ಪ ಎಚ್., ಜೆ.ಹೊನ್ನೂರಸ್ವಾಮಿ, ಗಾದಿಲಿಂಗಪ್ಪ ಇತರರು ಇದ್ದರು.

    ಇದು ನಡೆದದ್ದು: ವಿದ್ಯಾರ್ಥಿಗಳಿಗಾಗಿ ಬುಧವಾರ ರಾತ್ರಿ ಚಿಕನ್ ಸಾಂಬಾರ್ ಮಾಡಲಾಗಿತ್ತು. ಅದು ಸರಿಯಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಮಾಧಾನ ಮಾಡಲು ಯತ್ನಿಸಿದರು. ವಿದ್ಯಾರ್ಥಿಗಳು ಅದಕ್ಕೆ ಕಿವಿಗೂಡಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ಜಿಲ್ಲಾಧಿಕಾರಿ ಮನೆಗೆ ತೆರಳಿದರು. ಈ ಬಗ್ಗೆ ಮಾಹಿತಿ ಪಡೆದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಿಸಿ ಮನೆಗೆ ತೆರಳಿದ್ದ 25 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವಂತೆ ವಾರ್ಡನ್ ಶಿವಪ್ಪಗೆ ಸೂಚನೆ ನೀಡಿದರು. ಈಗ ಮನೆಗೆ ತೆರಳಿ ಪಾಲಕರನ್ನು ಕರೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳಿಗೆ ವಾಡ್ನ್ ಸೂಚನೆ ನೀಡಿದರು. ಇದಾದ ಮೇಲೆ ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡರು. ಸಚಿವರ ಸೂಚನೆ ಮೇರೆಗೆ ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಹಾಗೂ ಬೆಳಗ್ಗೆ ಉಪಾಹಾರ ಕೊಡಲಾಯಿತು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಡಿಸಿಯನ್ನು ಮತ್ತೆ ಭೇಟಿ ಮಾಡಿದ ವಿದ್ಯಾರ್ಥಿಗಳು, ಸಮಸ್ಯೆ ಹೇಳಿಕೊಂಡರು. ಮಾತನಾಡಿ ಡಿಸಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ರಾತ್ರಿ ವೇಳೆ ನಮ್ಮ ಮನೆ ತನಕ ಬರುವ ಅವಶ್ಯಕತೆ ಇರಲಿಲ್ಲ. ಏನಾದರೂ ಹೆಚ್ಚೂ-ಕಡಿಮೆಯಾದರೆ ಹೊಣೆ ಯಾರೆಂದು ಕೇಳಿದರು. ನಂತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ. ವಿದ್ಯಾರ್ಥಿಗಳನ್ನು ಹಿಂದಕ್ಕೆ ಕಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts