More

    ಬಳ್ಳಾರಿ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಅ.17ರಿಂದ ನವರಾತ್ರಿ ಪೂಜೆ: ಟ್ರಸ್ಟ್ ಅಧ್ಯಕ್ಷ ಮೀನಹಳ್ಳಿ ತಾಯಣ್ಣ ಮಾಹಿತಿ

    ಬಳ್ಳಾರಿ: ದಸರಾ ಹಿನ್ನೆಲೆಯಲ್ಲಿ ಪಟೇಲ್ ನಗರದ ದುರ್ಗಾ ಕಾಲನಿಯಲ್ಲಿರುವ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರೊನಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಮೀನಹಳ್ಳಿ ತಾಯಣ್ಣ ತಿಳಿಸಿದರು.

    ಅ.17ರಿಂದ 26ರವರೆಗೆ ಸಣ್ಣ ದುರ್ಗಮ್ಮ ದೇವಿಯ ಪ್ರತಿಮೆಗೆ ವಿವಿಧ ರೀತಿಯ ವಿಶೇಷ ಅಲಂಕಾರ ನಡೆಯಲಿದೆ. ನಿತ್ಯ ಬೆಳಗ್ಗೆ 5.30ಕ್ಕೆ ಪೂಜಾ ವಿಧಿ ವಿಧಾನಗಳು ಆರಂಭವಾಗಲಿವೆ. ಸಂಜೆ 5ರಿಂದ 6ರವರೆಗೆ ಲಲಿತ ಸಹಸ್ರನಾಮ, 8.30ಕ್ಕೆ ಮಂಗಳಾರತಿ, ಪಂಚಾಮೃತ ಅಭಿಷೇಕ ನಡೆಯಲಿದೆ. ಅ.24ರಂದು ಬೆಳಗ್ಗೆ 6ಕ್ಕೆ ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಗರ್ಭಗುಡಿ ಬಾಗಿಲಿಗೆ ಪಂಚಲೋಹದ ಕವಚ ನಿರ್ಮಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಭಕ್ತರು ವಾಸ್ಕ್ ಧರಿಸಿಕೊಂಡು ಬರಬೇಕು. ಒಂದು ಕುಟುಂಬಕ್ಕೆ ಇಬ್ಬರಿಗೆ ವಾತ್ರ ದೇವಸ್ಥಾನಕ್ಕೆ ಬರಲು ಅವಕಾಶ ಕಲ್ಪಿಸಲಾಗುವುದು. ವೃದ್ಧರು ಹಾಗೂ ಮಕ್ಕಳಿಗೆ ಅವಕಾಶ ಇಲ್ಲ. ದೇವಸ್ಥಾನದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಭಕ್ತರು ಪ್ರಸಾದ ಹಂಚಬಾರದು ಎಂದು ಮೀನಹಳ್ಳಿ ತಾಯಣ್ಣ ಹೇಳಿದರು. ದೇವಸ್ಥಾನದ ಟ್ರಸ್ಟ್ ಗೌರವ ಅಧ್ಯಕ್ಷ ಸಿ.ಎಸ್.ಸತ್ಯನಾರಾಯಣ, ಕಾರ್ಯದರ್ಶಿ ರಮೇಶ, ತಿಪ್ಪಣ್ಣ, ಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts