More

    ಡಾ.ನಂಜುಡಪ್ಪ ವರದಿ ಮುಂದುವರಿಯಲಿ ಎಂದ ಹೈ.ಕ ಸಮಿತಿಯ ಡಾ.ರಜಾಕ್ ಉಸ್ತಾದ್, ಸಿರಿಗೇರಿ ಪನ್ನರಾಜ್

    ಬಳ್ಳಾರಿ: ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಅಸಮಾನತೆ ಹೋಗಲಾಡಿಸುವವರೆಗೆ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ರಾಜ್ಯ ಬಜೆಟ್‌ನ ಶೇ.11 ಅನುದಾನ ಮೀಸಲಿಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಮತ್ತು ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಒತ್ತಾಯಿಸಿದರು.

    ನಗರದಲ್ಲಿ ಶನಿವಾರ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ನಂಜುಂಡಪ್ಪ ವರದಿ ಆಧಾರದ ಮೇಲೆ ಕ.ಕ ಭಾಗ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿಕೆ ಅವಶ್ಯ ಇಲ್ಲ. ನೀತಿ ಆಯೋಗದ ಮೂಲಕ ಅನುದಾನ ಬಿಡುಗಡೆ ಮಾಡೋಣ ಎಂದು ಸರ್ಕಾರ ಈಗ ನಿರ್ಧಾರ ತೆಗೆದುಕೊಂಡಿದೆ. ಇದು ಸರಿಯಲ್ಲ. 35 ಅಭಿವೃದ್ಧಿ ಸೂಚ್ಯಾಂಕಗಳ ಮೇಲೆ ಪ್ರಾದೇಶಿಕ ಅಸಮಾನತೆಯ ಬಗ್ಗೆ ಅಧ್ಯಯನ ಮಾಡಿ, ಡಾ.ನಂಜುಂಡಪ್ಪ ವರದಿ ನೀಡಿದ್ದರು. 2002 ವರದಿ ಸಲ್ಲಿಕೆಯಾಗಿ 2008ರಲ್ಲಿ ವಿಶೇಷ ಅಭಿವೃದ್ಧಿ ಅನುದಾನ ನೀಡಲು ಸರ್ಕಾರ ಪ್ರಕಟಿಸಿತ್ತು. ಅಲ್ಲಿಂದ ಇಲ್ಲಿವರೆಗೆ 40 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿ. ಕೇವಲ 29 ಸಾವಿರ ಕೋಟಿ ರೂ.ವೆಚ್ಚ ಮಾಡಿದೆ ಎಂದರು.

    ಕೃಷ್ಣ ಜಲಭಾಗ್ಯ ನಿಗಮದ ಬಾಂಡ್‌ಗಳ ಸಾಲ ತೀರಿಸಲು, ವಿಶೇಷ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಈಗಲೂ 93 ತಾಲೂಕಗಳು ಹಿಂದುಳಿದಿವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲ್ಬುರ್ಗಿ ಅಭಿವೃದ್ಧಿ ಮಂಡಳಿಯಾಗಿದೆ ಎಂದು ಆರೋಪಿಸಿದರು. ಬಳ್ಳಾರಿಗೆ 480 ಕೋಟಿ ದೊರೆತರೆ, ಕಲ್ಬುರ್ಗಿಯಲ್ಲಿ 1,450 ಕೋಟಿ ರೂ. ಬಳಕೆ ಮಾಡಿದೆ. ಇಲ್ಲಿನ ಶಾಸಕರು ಪ್ರಶ್ನಿಸದೇ ಇರುವುದು ದುರಾದೃಷ್ಟಕರವಾಗಿದೆ. ಇತ್ತೀಚೆಗೆ ಸರ್ಕಾರ ಬಜೆಟ್ ಮಂಡನೆ ವೇಳೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ 3,000 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಲಾಗಿದೆ.

    ಆದರೆ, ಈಗ ರಾಜ್ಯದ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ವಲಯವಾರು ಹಂಚಿಕೆ ಮಾಡುವಾಗ ವಿಶೇಷ ಅಭಿವೃಧ್ಧಿ ಯೋಜನೆ 1,000 ಕೋಟಿ ರೂ. ಅನುದಾನವನ್ನು ಕೆಕೆಆರ್‌ಡಿಬಿಗೆ ವರ್ಗಾಯಿಸಿ, ಕೇವಲ 2,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಪಕ್ಷದ ಶಾಸಕರು ಸರ್ಕಾರ ವಿರುದ್ಧ ಪ್ರತಿಭಟಿಸಿ, ಬಜೆಟ್‌ನಲ್ಲಿ ಘೋಷಿಸಿದಂತೆ ಸಂಪೂರ್ಣ ಅನುದಾನವನ್ನು ಕಕ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಒತ್ತಾಯಿಸಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts