More

    ಶಾಸಕ ಯತ್ನಾಳ್ ಕ್ಷಮೆಯಾಚಿಸುವಂತೆ ಬಣಜಿಗ ಸಮುದಾಯದ ಮುಖಂಡರ ಆಗ್ರಹ

    ಬಳ್ಳಾರಿ: ಅ.21ರಂದು ಬೆಳಗಾವಿಯ ಹುಕ್ಕೆರಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಬಹಿರಂಗ ಸಭೆಯಲ್ಲಿ ಬಣಿಜಗ ಸಮುದಾಯ ಸುಳ್ಳುಲೆಕ್ಕ ಬರೆದು ಶ್ರೀಮಂತವಾಗಿದೆ ಎಂದು ಹೇಳಿಕೆ ನೀಡಿರುವ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಣಜಿಗ ಸಮುದಾಯದ ಜಿಲ್ಲಾಧ್ಯಕ್ಷ ಕೋರಿ ವಿರೂಪಾಕ್ಷಪ್ಪ ಮತ್ತು ಮುಖಂಡರು ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಲಿಂಗಾಯತ ಸಮುದಾಯದ ಪ್ರಮುಖ ಒಳಪಂಗಡವಾದ ಬಣಜಿಗರ ಮೂಲ ವೃತ್ತಿ ವ್ಯಾಪಾರ. ಇದರ ಮತ್ತು ಸಮಾಜದ ಪ್ರಾಮಾಣಿಕತೆ ಬಗ್ಗೆ ಸಮಾಜಕ್ಕೆ ತಿಳಿದಿದೆ. ರಾಜಮಹಾರಾಜರ ಕಾಲದಿಂದಲೂ ಪ್ರಭಾವಶಾಲಿಯಾಗಿರುವ ಬಣಜಿಗ ಸಮುದಾಯದ ಅನೇಕರು ಶರಣರಾಗಿ, ಸಂತರಾಗಿ, ಮಠಾಧೀಶರಾಗಿ ಸಮಾಜದ ಒಳಿತಿಗೆ ದುಡಿದಿದ್ದಾರೆ. ಸಮುದಾಯದ ಪ್ರತೀಕವಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಡಿ.ಜತ್ತಿ, ಎಸ್.ನಿಜಲಿಂಗಪ್ಪ, ದಿ.ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ್, ಜೆ.ಎಚ್.ಪಾಟೀಲ್, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಮಾಜ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂತಹ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಶಾಸಕರು ಕ್ಷಮೆಯಾಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

    ಮುಖಂಡರಾದ ರೂಪನಗುಡಿ ಬಸವರಾಜ್, ಕಲ್ಗಡಿ ಮಂಜುನಾಥ, ಗಾಳಿ ರಾಜಶೇಖರ್, ಅಂಗಡಿ ಪಂಪಾಪತಿ, ಅಂಗಡಿ ಶಂಕರ್, ಮಹಾನಂದಿ ಬಸವಲಿಂಗಪ್ಪ, ನಾಗಭೂಷಣ್, ಚಾನಾಳ್ ಶೇಖರ್, ಗಂಗಾವತಿ ವೀರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts