More

    ಕಲಾವಿದರಿಗೆ ಮತ್ತಷ್ಟು ಅನುಕೂಲ; ಸಿಎಂ ಜತೆ ಚರ್ಚಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ

    ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

    ಬಳ್ಳಾರಿ: ಜೀವನವನ್ನೇ ಕಲಾಸೇವೆಯಲ್ಲಿ ತೊಡಗಿಸಿಕೊಂಡ ಕಲಾವಿದರು ಈಗ ಪ್ರಶಸ್ತಿ ಪಡೆಯುತ್ತಿರುವುದು ಸಂತಸ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

    ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 2021ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲೆಯ ಕಲಾವಿದೆ ಸುಭ್ರದಮ್ಮ ಮನ್ಸೂರ್ ರಾಜ್ಯ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರದಲ್ಲೂ ನಾಟಕ ಪ್ರದರ್ಶನ ಮಾಡಿ ಖ್ಯಾತಿ ಪಡೆದಿದ್ದರು. ‘ಹೇಮರಡ್ಡಿ ಮಲ್ಲಮ್ಮ’ ನಾಟಕದಲ್ಲಿ ಅಭಿನಯಿಸಿ ಮನೆ ಮಾತಾಗಿದ್ದಾರೆ. ಇಂದಿಗೂ ಮನೆಗಳಲ್ಲಿ ಅವರ ಫೋಟೊಗಳಿಗೆ ಪೂಜಿಸುವವರಿದ್ದಾರೆ. 25 ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸಮಾರಂಭ ನಡೆದಿರುವುದು ನಮ್ಮ ಸೌಭಾಗ್ಯ. ಈ ಮೊದಲು ಎಂ.ಪಿ.ಪ್ರಕಾಶ್ ಡಿಸಿಎಂ ಆಗಿದ್ದ ಅವಧಿಯಲ್ಲಿ ಇಂಥ ಸಮಾರಂಭ ನಡೆದಿತ್ತು. ಕಲಾವಿದರಿಗೆ ಇನ್ನಷ್ಟು ಅನುಕೂಲ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಮಾತನಾಡುವೆ ಎಂದರು.

    ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ ಮಾತನಾಡಿ, ಬಳ್ಳಾರಿ ಸೇರಿದಂತೆ ಹೈದಾರಬಾದ್, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕಲಬುರಗಿ ಮತ್ತು ರಾಜ್ಯದ ವಿವಿಧೆಡೆ ಹಲವಾರು ನಾಟಕಗಳನ್ನು ಹಮ್ಮಿಕೊಂಡಿದ್ದೇವೆ. ಕರೊನಾ ಸಂದರ್ಭ ಸಾಕಷ್ಟು ಅಡಚಣೆಗಳಾದವು. ಆದರೆ, ಅಕಾಡೆಮಿ ತನ್ನ ಕೆಲಸಗಳನ್ನು ಬೇರೆ ರೀತಿಯಲ್ಲಿ ಮಾಡಿತು. ಜಿಲ್ಲೆಯ ಐದು ಕಡೆ ರಂಗಶಿಬಿರ, ರಂಗಸಂಗಿತ, ಚಿತ್ರಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸಾಹಿ ಯುವ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಯ್ದ ಐದು ಜಿಲ್ಲೆಗಳಲ್ಲಿ ರಂಗವಲೋಕನ ಶಿಬಿರ ಮಾಡಿದ್ದೆವು ಎಂದರು.

    ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ, ನಗರ ಶಾಸಕ ಜಿ.ಸೋಮಶೇಖರೆಡ್ಡಿ ಮಾತನಾಡಿದರು. ಎಂಎಲ್ಸಿ ವೈ.ಎಂ.ಸತೀಶ್, ಬುಡಾ ಅಧ್ಯಕ್ಷ ಪಾಲನ್ನ, ನಾಡೋಜ ಬೆಳಗಲ್ಲು ವೀರಣ್ಣ, ಸಿಎ ಜಯಪ್ರಕಾಶ ಗುಪ್ತ, ತೆರಿಗೆ ಸಲಗೆಗಾರ ಎನ್.ಯಶವಂತರಾಜ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಸಿ.ಶ್ರೀನಿವಾಸ್, ಅಕಾಡೆಮಿ ಸದಸ್ಯ ಸಂಚಾಲಕ ಪ್ರಭುದೇವ ಕಪ್ಪಗಲ್ಲು, ರಿಜಿಸ್ಟ್ರಾರ್ ಬಿ.ಮಂಜುನಾಥ್ ಆರಾಧ್ಯ ಇತರರಿದ್ದರು.

    ಕಲಾವಿದರಿಗೆ ಮತ್ತಷ್ಟು ಅನುಕೂಲ; ಸಿಎಂ ಜತೆ ಚರ್ಚಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts