More

    ಲೋಕಾರ್ಪಣೆಗೆ ಸಜ್ಜಾಗುತ್ತಿವೆ ಕಟ್ಟಡಗಳು

    ಆ.15ರಂದು ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ | ತೀವ್ರ ವೇಗ ಪಡೆದಿದೆ ನಿರ್ಮಾಣ ಕಾಮಗಾರಿ

    ಬಾಬುಪ್ರಸಾದ ತಾಳೂರು ಬಳ್ಳಾರಿ

    ನಗರದಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾಕ್ರೀಡಾಂಗಣ, ಹಾಕಿ ಕ್ರೀಡಾಂಗಣ ಸೇರಿ ವಿವಿಧ ಕಾಮಗಾರಿಗಳು ವೇಗ ಪಡೆದಿದ್ದು, ಆಜಾದಿ ಕಾ ಆಮೃತ್ ಮಹೋತ್ಸವ ಅಂಗವಾಗಿ ಆ.15ರಂದು ಲೋಕಾರ್ಪಣೆಗೊಳಿಸಲು ಜಿಲ್ಲಾಡಳಿತ ಸಿದ್ಧಗೊಂಡಿದೆ.

    ಈವರೆಗೆ ಸರ್ಕಾರಿ ಕಚೇರಿಗಳಿಗೆ ಸೂಕ್ತ ನೆಲೆಯಿರಲಿಲ್ಲ. ಹೀಗಾಗಿ, ಸರ್ಕಾರ ಜಿಲ್ಲಾಧಿಕಾರಿ ಭವನದ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ತಂದು, ಸಾರ್ವಜನಿಕರ ಅಲೆದಾಟ ತಪ್ಪಿಸಲು 2019ರ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಿತ್ತು. ಅನುದಾನ ಕೊರತೆ ಕಾರಣದಿಂದ ಕೆಲ ತಿಂಗಳಿಂದ ವಿಳಂಬವಾಗಿತ್ತು. ಈಗ ಕೆಲಸ ವೇಗ ಪಡೆದಿದ್ದು, ಆ.15ಕ್ಕೆ ಉದ್ಘಾಟನೆಗೊಳ್ಳುವ ಸಾದ್ಯತೆ ಅಧಿಕವಾಗಿದೆ.

    ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಈಗ ಸಿಂಥೆಟಿಕ್ ಟ್ರ್ಯಾಕ್, ಪೆವಿಲಿಯನ್, ಲೈಟಿಂಗ್ ಕಾಪೌಂಡ್ ಸೇರಿ ಕ್ರೀಡಾಂಗಣ ಮುಂಭಾಗದಲ್ಲಿ ಹಾಕಿ ಅಂಕಣ ಸೇರಿ ಬಹುತೇಕ ಕಾಮಗಾರಿ ಮುಕ್ತಾಯವಾಗಿವೆ. ಈ ಬೆಳವಣಿಗೆ ಕ್ರೀಡಾ ಪ್ರೇಮಿಗಳಲ್ಲಿ ಉತ್ಸಾಹ ಮೂಡಿಸಿದೆ. ಹೊರಾಂಗಣ ಮತ್ತು ಒಳಾಂಗಣ, ಕ್ರೀಡಾ ಸೌಕರ್ಯಗಳನ್ನು ಒದಗಿಸಲು ಗಮನ ಕೊಟ್ಟಿರುವ ಜಿಲ್ಲಾಡಳಿತ ಹಾಕಿ ಕ್ರೀಡಾಂಗಣ, ಸಿಂಥೆಟಿಕ್ ಟ್ರ್ಯಾಕ್. ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿದೆ. ಈ ಮುಂಚೆ ಕ್ರೀಡಾಂಗಣದ ಮಣ್ಣಿನಲ್ಲೇ ಕ್ರೀಡಾಳುಗಳು ಅಭ್ಯಾಸ ಮಾಡುತ್ತಿದ್ದರು. ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಇದರಿಂದ, ಆನೇಕರು ಗಾಯಗೊಂಡಿದ್ದರು. ಈಗ ಸಿಂಥೆಟಿಕ್ ಮತ್ತು 8 ಪಥದ 400 ಮೀ. ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅನುಕೂಲವಾಗಲಿದೆ. ಇದರ ಜತೆ ಕ್ರೀಡಾಂಗಣಕ್ಕೆ ಪೆವಿಲಿಯನ್ ನಿರ್ಮಾಣ ಮಾಡಲಾಗುತ್ತಿದೆ.

    ಮೊದಲ ಬಾರಿಗೆ ಹಾಕಿ ಅಂಕಣ: ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದಲ್ಲಿರುವ ಸ್ಥಳವನ್ನು ಹಾಕಿ ಕ್ರೀಡಾಂಗಣಕ್ಕೆ ಮೀಸಲಿರಿಸಲಾಗಿದೆ. ಈ ಮುಂಚೆ ಕಾಪೌಂಡ್ ಭದ್ರತೆ ಇಲ್ಲದಿರುವುದರಿಂದ ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಿತ್ತು. ಬೆಳಗ್ಗೆ ಮೈದಾನಕ್ಕೆ ಬರುವ ಕ್ರೀಡಾಪಟುಗಳೇ ಮದ್ಯದ ಖಾಲಿ ಬಾಟಲಿಗಳನ್ನು ತೆರವುಗೊಳಿಸಬೇಕಾಗುತ್ತಿತ್ತು. ಆದರೆ, ಪ್ರಸ್ತುತ ಇಲ್ಲಿನ ಡಿಎಂಎಫ್ ಅನುದಾನದಡಿ 1.80 ಕೋಟಿ ರೂ. ವೆಚ್ಚದಲ್ಲಿ ಹಾಕಿ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಕೋರ್ಟ್‌ಗೆ ಅಳವಡಿಸುವ ಟರ್ಫ್‌ಅನ್ನು ಯೂರೋಪ್‌ನಿಂದ ತರಿಸಲಾಗುತ್ತಿದೆ.

    ಪ್ರವಾಸೋದ್ಯಮ ಕೆರೆ ನಿರ್ಮಾಣ: ನಗರ ವಾಸಿಗಳು, ಪ್ರವಾಸಿಗರ ಮನತಣಿಸಲು ಡಿಎಂಎಫ್ ಅನುದಾನದಡಿ 1.85 ಕೋಟಿ ರೂ. ವೆಚ್ಚದಲ್ಲಿ 13 ಎಕರೆಯಲ್ಲಿ ಸುಸಜ್ಜಿತ ಪ್ರವಾಸೋದ್ಯಮ ಕೆರೆ ನಿರ್ಮಿಸಿ ಬಳ್ಳಾರಿ ಜಿಲ್ಲಾಡಳಿತ ಜನರಿಗೆ ಕೊಡುಗೆ ನೀಡಲು ಸಿದ್ಧತೆ ನಡೆಸಿದ್ದು, ಪ್ರವಾಸೋದ್ಯಮ ಕೆರೆ ಕಾಮಗಾರಿ ಮುಕ್ತಾಯವಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಇನ್ನು ಸುಸಜ್ಜಿತ ಕೆರೆಗೆ ನೀರಿನ ವ್ಯವಸ್ಥೆ ಕಲ್ಪಿಸಲು ಬೋರ್‌ವೆಲ್ ಸೌಲಭ್ಯ ನೀಡುವ ಕಾಮಗಾರಿ ಆರಂಭವಾಗಲಿದ್ದು, ಇದರಿಂದ ನೀರಿನ ತೊಂದರೆ ಆಗುವುದಿಲ್ಲ. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಇರಲಿದೆ.

    ಲೋಕಾರ್ಪಣೆಗೆ ಸಜ್ಜಾಗುತ್ತಿವೆ ಕಟ್ಟಡಗಳು

    ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್, ಹಾಕಿ ಅಂಕಣ, ಈಜುಕೊಳ ಕಾಮಗಾರಿಯನ್ನು ಒಂದು ತಿಂಗಳೊಳಗೆ ಮುಗಿಸಲು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಸೂಚಿಸಿದ್ದಾರೆ. ಹೀಗಾಗಿ, ಕೆಲಸ ಭರದಿಂದ ಸಾಗಿದೆ. ಆ.15ಕ್ಕೆ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
    | ಹರಿಸಿಂಗ್ ರಥೋಡ್ ಉಪನಿರ್ದೇಶಕ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ

    ಜಿಲ್ಲಾಡಳಿತ ಭವನ, ಜಿಲ್ಲಾಕ್ರೀಡಾಂಗಣ, ಹಾಕಿ ಅಂಕಣ, ಪ್ರವಾಸೋದ್ಯಮ ಕೆರೆ ಸೇರಿ ವಿವಿಧ ಕಾಮಗಾರಿಗಳ ಕೆಲಸ ಮುಗಿಯುತ್ತಿದ್ದು, ಆ.15ರಂದು ಉದ್ಘಾಟಿಸುವ ಚಿಂತನೆ ಇದೆ. ಆದರೆ, ನಮ್ಮ ಮೊದಲ ಅದ್ಯತೆ ಉತ್ತಮ ಗುಣಮಟ್ಟ ಕೆಲಸ ನಡೆಯಬೇಕು. ಮುಂದೆ ನೋಡೊಣ ಎನಾಗುತ್ತೊ.
    | ಪವನ್‌ಕುಮಾರ್ ಮಾಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿ

    ಲೋಕಾರ್ಪಣೆಗೆ ಸಜ್ಜಾಗುತ್ತಿವೆ ಕಟ್ಟಡಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts