More

    ಧನ-ಕನಕಗಳಿಂದ ರೆಡ್ಡಿಗೆ ತುಲಾಭಾರ


    ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ 55ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಂಗಳವಾರ ಧನ-ಕನಕದ ತುಲಾಭಾರ ಮಾಡಿದರು.

    55 ಬೆಳ್ಳಿ ನಾಣ್ಯಗಳು, 55 ಬಂಗಾರದ ನಾಣ್ಯಗಳ ಜತೆಗೆ ಐದು ರೂ. ಮತ್ತು ಹತ್ತು ರೂ. ನಾಣ್ಯಗಳಿಂದ ತುಲಾಭಾರ ನಡೆಯಿತು. ಪತ್ನಿ ಅರುಣಾ ಲಕ್ಷ್ಮಿ, ಸಹೋದರ ಮತ್ತು ಶಾಸಕ ಸೋಮಶೇಖರ ರೆಡ್ಡಿ, ಸ್ನೇಹಿತ ಸಚಿವ ಶ್ರೀರಾಮುಲು ಮತ್ತು ಕುಟುಂಬದ ಸದಸ್ಯರೊಂದಿಗೆ ರೆಡ್ಡಿ ಭಾಗವಹಿಸಿದ್ದರು. ದೇವಸ್ಥಾನದ ಬಳಿ ಸೇರಿದ್ದ ನೂರಾರು ಅಭಿಮಾನಿಗಳು ತಮಟೆ ಬಾರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಳ್ಳಾರಿಗೆ ಬಂದರೆ ದುರ್ಗಮ್ಮ ಗುಡಿಗೆ ತುಲಾಭಾರ ಮಾಡಿ ಅರ್ಪಿಸುವುದಾಗಿ ಅಭಿಮಾನಿಗಳು ಹರಕೆ ಹೊತ್ತಿದ್ದರು. 11 ವರ್ಷಗಳ ಬಳಿಕ ಅದ್ದೂರಿಯಾಗಿ ನಗರದಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದೇನೆ. ಈಗ ರಾಜಕೀಯ ಮಾತಾಡಲ್ಲ, ಫೆಬ್ರವರಿ ನಂತರ ಸಮಯ ನಿಗದಿ ಮಾಡಿ ಹೇಳುವೆ ಎಂದರು. ಬುಡಾ ಅಧ್ಯಕ್ಷ ಪಿ.ಪಾಲಣ್ಣ, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ಪಾಲಿಕೆ ಸದಸ್ಯರು ಇದ್ದರು.

    ನನ್ನ ಪುತ್ರ ಕಿರಿಟಿ ಸಿನಿಮಾ ಇದೇ 20 ರಂದು ಪ್ರಾರಂಭವಾಗಬೇಕಿತ್ತು. ಕರೊನಾ ಕಾರಣ ಮುಂದೂಡಲಾಗಿದೆ. ಮುಂದಿನ ತಿಂಗಳು ಸೆಟ್ಟೇರಲಿಸದೆ. ಬಳ್ಳಾರಿಯರೇ ಅದ ಕೊರಪಾಟಿ ಸಾಯಿ ನಿರ್ಮಿಸಲಿದ್ದಾರೆ. ಮಾಯಾಬಜಾರ್ ಸಿನಿಮಾ ನಿರ್ದೇಶಕ ರಾಧಾಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಲ್ಲ. ಕೇವಲ ಕನ್ನಡ-ತೆಲುಗಿನಲ್ಲಿ ಮಾತ್ರ ಬರಲಿದೆ.
    | ಜನಾರ್ದನ ರೆಡ್ಡಿ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts