More

    ಬಳ್ಳಾರಿಯಲ್ಲಿ ಪ್ರಥಮ ರಾಜ್ಯ ಸಮ್ಮೇಳನ, ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ಲು ಮಾಹಿತಿ

    ಬಳ್ಳಾರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಟಕಗಳ ಪ್ರದರ್ಶನ ನೀಡುತ್ತಿರುವ 25ಕ್ಕೂ ಹೆಚ್ಚು ವೃತ್ತಿ ಕಂಪನಿ ನಾಟಕಗಳ ಕಲಾವಿದರ, ರಾಜ್ಯ ಮಟ್ಟದ ಪ್ರಪ್ರಥಮ ಸಮ್ಮೇಳನ ಬಳ್ಳಾರಿಯಲ್ಲಿ ಅ.28,29ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ಲು ಹೇಳಿದರು.

    ಕಲೆಯೇ ಸರ್ವಸ್ವವೆಂದು ಬದುಕುತ್ತಿರುವ ಈ ಕಲಾವಿದರ, ಮಾಲೀಕರ ಬೆಂಬಲಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಗಳು ಸ್ಪಂದಿಸುತ್ತಿದ್ದರೂ ಅವರ ಬದುಕು ಸಂತಸಕರವಾಗಿಲ್ಲ. ಇದುವರೆಗೆ ವೃತ್ತಿ ಕಂಪನಿ ನಾಟಕಗಳು ಕರ್ನಾಟಕ ನಾಟಕ ಅಕಾಡೆಮಿಯ ಪರಧಿಗೆ ಬಂದಿಲ್ಲದಿರುವುದನ್ನು ಮನಗಂಡಿದೆ. ಹೀಗಾಗಿ, ಕರ್ನಾಟಕ ನಾಟಕ ಅಕಾಡೆಮಿ ಈ ವೃತ್ತಿ ಕಂಪನಿ ನಾಟಕಗಳ ಮಾಲೀಕರ, ಕಲಾವಿದರ, ನೇಪಥ್ಯದವರ ಬೃಹತ್ ಸಮ್ಮೇಳನ ಸ್ಥಳೀಯರ ನೆರವಿನೊಂದಿಗೆ ಹಮ್ಮಿಕೊಳ್ಳಲಾಗಿದೆ.

    ಸಮ್ಮೇಳನದಲ್ಲಿ ಕಂಪನಿ ನಾಟಕಗಳ ವೈಭವ, ಪರಂಪರೆಯ ಕಿರುದರ್ಶನದ ಒಂದು ಪ್ರದರ್ಶನ, ಕಂಪನಿ ಕಲಾವಿದರು, ಮಾಲೀಕರು ಮತ್ತು ನೇಪಥ್ಯ ಕಲಾವಿದರ ವಿವಿಧ ಗೋಷ್ಠಿಗಳು, ಆಕರ್ಷಕ ರಂಗ ಶೋಭಾಯಾತ್ರೆ, ರಂಗ ತಜ್ಞರ ವಿಶೇಷ ಭಾಷಣ, ವಿವಿಧ ಕಂಪನಿ ಕಲಾವಿದರ ರಸಮಯ ರಂಗ ದೃಶ್ಯಾವಳಿ, ವಿವಿಧ ವಿನೋದಾವಳಿಯ ಹಂಬಲದ ರಂಗ ಬೆಳದಿಂಗಳು (ಕ್ಯಾಂಪ್ ಫೈರ್) ಹಾಗೂ ಪ್ರಥಮ ದಾಖಲೆ ಬರೆದಿರುವ ಹೇಮರೆಡ್ಡಿ ಮಲ್ಲಮ್ಮ ನಾಟಕದ ವಿಶೇಷ ಪ್ರದರ್ಶನ ನಡೆಯಲಿದೆ.

    ನಾಡಿನಾದ್ಯಂತ ಪ್ರಸಕ್ತ ಕ್ರಿಯಾಶೀಲವಾಗಿರುವ 25ಕ್ಕೂ ಹೆಚ್ಚು ವೃತ್ತಿ ಕಂಪನಿ ಮಾಲೀಕರು, ಮತ್ತವರ ಕಂಪನಿಗಳ ಕಲಾವಿದರು ಎರಡು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅಂದಾಜು 600ಕ್ಕೂ ಹೆಚ್ಚು ಪ್ರತಿನಿಧಿಗಳು ಎರಡು ದಿನಗಳ ತಮ್ಮ ಕಂಪನಿ ನಾಟಕ ಪ್ರದರ್ಶನಗಳನ್ನು ಬಂದ್ ಮಾಡಿಬರಲಿದ್ದು, ಅವರಿಗೆ ಕಾರ್ಮಿಕ ಇಲಾಖೆಯ ಇ-ಶ್ರಮಕಾರ್ಡ್, ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿಗಾಗಿಯೂ ಪ್ರಯತ್ನ ನಡೆಸಲಾಗುತ್ತಿದೆ. ಪ್ರಪ್ರಥಮ ರಾಜ್ಯ ಸಮ್ಮೇಳನಕ್ಕೆ ನಗರದ ಸಹೃದಯಿ ಪ್ರೇಕ್ಷಕರು, ಹಿತೈಷಿಗಳು, ಅಭಿಮಾನಿಗಳು, ಸಾರ್ವಜನಿಕರು ವೃತ್ತಿ ಕಲಾವಿದರನ್ನು ಸಮೇಳನಕ್ಕೆ ಭಾಗವಹಿಸಿ ಎಂದು ಮನವಿ ಮಾಡಿದ್ದಾರೆ. ಜಾನಪದ ಅಕಾಡೆಮಿ ಸದಸ್ಯರಾದ ಶಿವೇಶ್ವರಗೌಡ ಕಲ್ಲುಕಂಬ, ರಂಗತೋರಣದ ಅಡವಿಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts