More

    ಬಳ್ಳಾರಿ ಜಿಲ್ಲೆಯಲ್ಲಿ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧ, ಪ್ರಯಾಣಿಕ ಪರದಾಟ

    ಬಳ್ಳಾರಿ: ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರ ಎರಡು ದಿನ ಪೂರೈಸಿದೆ. ಶನಿವಾರ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

    ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳು ವಿರಳವಾಗಿದ್ದವು. ನಿಲ್ದಾಣದ ಎದುರು ಪ್ರಯಾಣಿಕರು ಊರುಗಳಿಗೆ ತೆರಳಲು ಖಾಸಗಿ ವಾಹನಗಳನ್ನು ಹುಡುಕುವಂತಾಗಿತ್ತು. ಖಾಸಗಿ ವಾಹನಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಕಂಡುಬಂತು.

    ತೊರಣಗಲ್‌ಗೆ ಹೋಗಬೇಕೆಂದು ಬಸ್ ನಿಲ್ದಾಣಕ್ಕೆ ಬಂದಿದ್ದ ನಗರದ ಮಲ್ಲಮ್ಮಗೆ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾಹಿತಿ ಇರಲಿಲ್ಲ. ಖಾಸಗಿ ವಾಹನದಲ್ಲಿ ತೋರಣಗಲ್‌ಗೆ ಹೋಗುವುದಾಗಿ ತಿಳಿಸಿದರು. ಖಾಸಗಿ ಬಸ್‌ನಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತ ನೀಡಿ ಧರ್ಮಸ್ಥಳದಿಂದ ಬಂದಿದ್ದ ಪೇಂಟರ್ ಶಿವು, ಗಂಗಾವತಿಗೆ ಹೋಗಲು ವಾಹನ ಹುಡುಕುತ್ತಿದ್ದರು. ಅನಿವಾರ್ಯವಾಗಿ ಖಾಸಗಿ ವಾಹನದಲ್ಲಿ ಹೋಗಬೇಕಾಗಿದೆ ಎಂದು ಪ್ರತಿಕ್ರಿಯಿಸಿದರು.

    ಬಳ್ಳಾರಿ ಸಾರಿಗೆ ವಿಭಾಗದಲ್ಲಿ ಶನಿವಾರ ಯಾವುದೇ ಬಸ್‌ಗಳು ಕಾರ್ಯಾಚರಣೆ ಕೈಗೊಂಡಿಲ್ಲ. ನೌಕರರು ಕೆಲಸಕ್ಕೆ ಬರುವ ನಿರೀಕ್ಷೆ ಇದೆ. ಶುಕ್ರವಾರ 209 ಬಸ್‌ಗಳ ಪೈಕಿ 83 ಬಸ್‌ಗಳು ಸಂಚರಿಸಿದ್ದವು.
    | ಎಸ್.ಆರ್.ಚಂದ್ರಶೇಖರ, ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ

    ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಮೂರು ಬಸ್‌ಗಳಿಗೆ ಕಲ್ಲು ಎಸೆಯಲಾಗಿದೆ. ಕಲ್ಲು ಎಸೆದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಕಲ್ಲು ಎಸೆದವರ ಪತ್ತೆಗೆ ತಂಡ ರಚಿಸಲಾಗಿದೆ.
    | ಸೈದುಲು ಅದಾವತ್, ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts