More

    ವಿಭಿನ್ನ ಕಲೆಯ ಕಲಾವಿದ ಗೋವಿಂದವಾಡ: ಶಾಸಕ ಜಿ.ಸೋಮಶೇಖರರೆಡ್ಡಿ ಬಣ್ಣನೆ

    ಬಳ್ಳಾರಿ: ನೋಡಿದ ತಕ್ಷಣ ಮನಸಿಗೆ ಮುದ ನೀಡುವ ಸುಂದರ ಚಿತ್ರಗಳ ಚಿತ್ರಿಸುವ ಕಲಾವಿದ ಮಂಜುನಾಥ್ ಗೋವಿಂದವಾಡ ಕಲೆ ಮತ್ತು ವೇದಿಕೆ ನಿರ್ಮಾಣದ ಕಾರ್ಯ ವಿಭಿನ್ನ ಮತ್ತು ವಿಶಿಷ್ಟವಾದದ್ದು ಎಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಬಣ್ಣಿಸಿದರು.

    ನಗರದ ರಾಘವ ಕಲಾ ಮಂದಿರದಲ್ಲಿ ಶ್ರೀಮಂಜುನಾಥ ಲಲಿತಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಗೀಗಿ ಜಕ್ಕಣಕ್ಕ ದೇಸಿಪದ ಮತ್ತು ಹೆಜ್ಜೆಗಳ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಕರ್ಷಕ ಕಲೆ ಹೊಂದಿದ ಗೋವಿಂದವಾಡ ನಂತಹ ಕಲಾವಿದ ಸಂಖ್ಯೆ ವಿರಳ. ಇವರ ಕಲೆ ಮತ್ತಷ್ಟು ವೇದಿಕೆಗಳಲ್ಲಿ ಪ್ರದರ್ಶನವಾಗಲಿ, ಅನೇಕ ಸಾಧನೆಗಳು ಇವರ ಮುಡಿಗೇರಲಿ. ಹಂಪಿ ಉತ್ಸವದಂತಹ ವೇದಿಕೆಯನ್ನು ನಿರ್ಮಾಣ ಮಾಡುವ ಇವರ ಕಲೆ ಅದ್ಭುತವಾಗಿದೆ. ಸಾಕ್ಷಾತ್ ಹಂಪಿಯ ಶಿಲ್ಪ ಶೈಲಿಯನ್ನು ಇವರ ವೇದಿಕೆಗಳಲ್ಲಿ ನೋಡಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಮಾತನಾಡಿ, ಮಂಜುನಾಥ್ ಗೋವಿಂದವಾಡ ಬೆಳೆದು ಬಂದ ಹಾದಿ ಮತ್ತು ಹಿನ್ನಲೆ ಕುರಿತಂತೆ ಅನೇಕ ವಿಚಾರಗಳನ್ನು ತಿಳಿಸಿದರಲ್ಲದೇ, ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಬಳ್ಳಾರಿ ಉಸ್ತುವಾರಿ ಸಂದರ್ಭ ಅನೇಕ ಸ್ಥಳೀಯ ಪ್ರತಿಭೆಗಳಿಗೆ ಕಲಾ ಸಾಧನೆ ಮಾಡುವುದಕ್ಕೆ ನೆರವಾದರು ಎಂದರು.

    ಬಳಿಕ ಕಲಾವಿದ ಜೆ.ಎಂ.ಬಸವರಾಜಸ್ವಾಮಿ ಬೆಳಗಲ್ಲರಿಗೆ ಜನಮುಖಿ ಸೇವಾ ಪ್ರಶಸ್ತಿ, ಭರತನಾಟ್ಯ ಕಲಾವಿದೆ ಸಮೀರಾ ಎಸ್.ಕೆಗೆ ನೃತ್ಯಶ್ರೀ ಹಾಗೂ ಮಯೂಕಗೆ ನಾಟ್ಯಶ್ರೀ ಪ್ರಶಸ್ತಿ ನೀಡಲಾಯಿತು. ಕಲಾವಿದ ಮಂಜುನಾಥ ಗೋವಿಂದವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡಿ ಸಿದ್ದಲಿಂಗೇಶ್ ರಂಗಣ್ಣವರ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ ಸೇರಿದಂತೆ ಪ್ರಮುಖರಾದ ಎಸ್.ಎಂ.ಸಿದ್ದೇಶ್, ಯಲ್ಲನಗೌಡ ಶಂಕರಬಂಡೆ, ಷಡಕ್ಷರಿಸ್ವಾಮಿ, ಜೆ.ಎಂ.ಬಸವರಾಜ್‌ಸ್ವಾಮಿ, ಎಚ್.ತಿಪ್ಪೇಸ್ವಾಮಿ, ಎಸ್.ಕೆ.ಆರ್.ಜಿಲಾನಿಬಾಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts