More

    ಬಿಟ್‌ಕಾಯಿನ್ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಿ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹ


    ಬಳ್ಳಾರಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಫೆಲ್, ಪೆಗಾಸಸ್, ಬಿಟ್‌ಕಾಯಿನ್ ಪ್ರಕರಣಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷ್ಯದಿಂದ ಭಾರತದ ಪ್ರಜಾಪ್ರಭುತ್ವ ನೆಲಕಚ್ಚಿದೆ. ರಫೆಲ್ ಹಗರಣದಲ್ಲಿ 126 ಯುದ್ಧ ವಿಮಾನ ಬೇಡ, ಕೇವಲ 36 ಸಾಕು ಎಂದಿದ್ದಾರೆ. ಇದರ ಜತೆ ಬೆಂಗಳೂರಿನ ಎಚ್‌ಇಲ್‌ನಲ್ಲಿ ಯುದ್ಧ ವಿಮಾನ ಅಭಿವೃದ್ಧಿ ಮಾಡುವುದು ಬೇಡ. ರಿಲಯನ್ಸ್ ಕಂಪನಿಗೆ ಹಸ್ತಾಂತರಿಸಲು ಒತ್ತಾಯಿಸಲಾಗುತ್ತಿದೆ. ಈ ಪ್ರಕರಣದಲ್ಲಿ 37 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕೋರ್ಟ್, ತನಿಖೆ ನಡೆಸಲು ಸರ್ಕಾರಕ್ಕೆ ಆದೇಶ ನೀಡಿದೆ. ಪೆಗಾಸೆಸ್ ದೇಶದ ದೊಡ್ಡ ಹಗರಣ, 2018ರಲ್ಲಿ ನಾನು ಪ್ರಶ್ನೆ ಮಾಡಿದೆ. ಅಂದು, ಬಿಜೆಪಿ ಸರ್ಕಾರ ಮಾತನಾಡಲಿಲ್ಲ, ಈಗ ಸಿಬಿಐ ತನಿಖೆಗೆ ವಹಿಸಲು ಹಿಂದೆ ಏಕೆ ಸರಿಯುತ್ತಿದೆ ಎಂದು ಪ್ರಶ್ನಿಸಿದರು.

    ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕಿ ಎಂಬುವನು ಪ್ರಖ್ಯಾತರ ಪ್ರಮುಖ ದಾಖಲೆಗಳನ್ನು ಹ್ಯಾಕ್ ಮಾಡಿದ್ದಾನೆ. ಅಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಚಳಕ ತೋರಿಸಿದ್ದಾನೆ. ಇದರಿಂದ ದೇಶದ ಗೌರವ ಹಾಳಾಗುತ್ತಿದೆ. ಬಿಟ್ ಕಾಯಿನ್ ನೆಪದಲ್ಲಿ ರಾಜ್ಯಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts