More

    ಬೆಳಗಾವಿ ಎಂದೆಂದಿಗೂ ನಮ್ಮದೇ

    ಬೆಳಗಾವಿ: ಜಿಲ್ಲೆಯ ಗಡಿಭಾಗದಲ್ಲಿ ಶಿವಸೇನೆ ಗುರುವಾರ ನಡೆಸಿದ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ವಿವಿಧ ಜಿಲ್ಲೆಯ ಕಾರ್ಯಕರ್ತರು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಬೆಳಗಾವಿ ಗಡಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಬೆಳಗಾವಿ ಎಂದೆಂದಿಗೂ ನಮ್ಮದೇ’ ಎಂದು ಘೋಷಣೆ ಕೂಗಿದರು.
    ಪೊಲೀಸರ ತಡೆ: ಇದಕ್ಕೂ ಮುನ್ನ 35ಕ್ಕೂ ಹೆಚ್ಚು ವಾಹನಗಳಲ್ಲಿ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದ ಕರವೇ ಯುವಸೇನೆ ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್ ಬಳಿ ತಡೆದರು. ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದಿದ್ದಕ್ಕೆ ಹೋರಾಟಗಾರರು ಹೆದ್ದಾರಿ ತಡೆಯಲು ಮುಂದಾದರು. ಬಳಿಕ ಚನ್ನಮ್ಮ ವೃತ್ತದವರೆಗೆ ಬರಲು ಹೋರಾಟಗಾರರಿಗೆ ಪೊಲೀಸರು ಅನುಮತಿ ನೀಡಿದರು. ಹಿರೇಬಾಗೇವಾಡಿಯಿಂದ ಪೊಲೀಸ್ ಭದ್ರತೆಯಲ್ಲೇ ಕನ್ನಡಪರ ಹೋರಾಟಗಾರರು ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದರು. ಕೆಲ ಹೊತ್ತು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಶಿನೋಳಿಗೆ ತೆರಳಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ದರು. ಯಾವುದೇ ಅಹಿತರ ಘಟನೆ ನಡೆಸದಂತೆ ಎಚ್ಚರಿಕೆ ನೀಡಿ, ಪೊಲೀಸರು ಬಿಡುಗಡೆ ಮಾಡಿದರು.ಕರವೇ ಯುವಸೇನೆ ಅಧ್ಯಕ್ಷ ಹರೀಶ, ಉಪಾಧ್ಯಕ್ಷ ಕೃಷ್ಣಾಜಿರಾವ್, ಕಾರ್ಯಕರ್ತರಾದ ಶ್ರೀಕಾಂತ ಚಿಂತಾಮಣಿ, ಗಣೇಶ ಆಟೋ, ಮಂಜುನಾಥ ಆಟೋ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts