More

    ಕರೊನಾ ಸಮಯದಲ್ಲಿ ಉಪಯೋಗಕ್ಕೆ ಬಂದ ಮೂಢನಂಬಿಕೆ: ಅಚ್ಚರಿಯಾದ್ರೂ ಇದು ಸತ್ಯ…!

    ಬೆಳಗಾವಿ: ಕೆಲವೊಮ್ಮೆ ಮೂಢನಂಬಿಕೆಗಳು ಸಹ ವರವಾಗುತ್ತವೆ ಎಂಬುದಕ್ಕೆ ರಾಯಭಾಗ ತಾಲೂಕಿನ ಗ್ರಾಮವೊಂದು ಸಾಕ್ಷಿಯಾಗಿದೆ. ಹಾಗಾಂತ ಮೂಢನಂಬಿಕೆಗೆ ಅಂಟಿಕೊಳ್ಳುವುದು ಕೂಡ ಒಳ್ಳೆಯದಲ್ಲ ಎಂಬುದನ್ನು ಮರೆಯಬಾರದು.

    ಇದನ್ನೂ ಓದಿ: ಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!

    ಕರೊನಾ ವೈರಸ್​ನಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮೂಢನಂಬಿಕೆ ಸರಿಯಾಗಿ ಉಪಯೋಗಕ್ಕೆ ಬಂದಿದೆ. ದೇವರು ಹೇಳಿದ್ದಾನೆ ಎಂದು ಊರಿಗೂರೇ ಬಂದ್ ಮಾಡಿದ್ದರಿಂದ ಗ್ರಾಮಸ್ಥರಿಗೆ ಅದರಿಂದ ಲಾಭವೂ ಆಗಿದೆ.

    ಹೌದು, ನಾವು ಹೇಳ ಹೊರಟಿರುವುದು ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದ ಕತೆ. 3 ಸೋಮವಾರ ಮತ್ತು 2 ಶುಕ್ರವಾರ ಇಡೀ ಗ್ರಾಮವನ್ನೇ ಬಂದ್ ಮಾಡಿ ನಮ್ಮೂರಿಗೆ ಕರೊನಾ ಬರುವುದಿಲ್ಲ ಎಂದು ಊರಿನ ಆರಾಧ್ಯ ದೈವ ಹಾಲಸಿದ್ದ ನುಡಿದಿದ್ದನಂತೆ. ಹೀಗಾಗಿ ಇಡೀ ಊರನ್ನೇ ಗ್ರಾಮಸ್ಥರು ಬಂದ್​ ಮಾಡಿದ್ದರು.

    ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಯಾವುದೇ ಅಂಗಡಿ ವಹಿವಾಟು ನಡೆಸದೆ ಸಂಪೂರ್ಣ ಗ್ರಾಮವನ್ನೇ ಮುಚ್ಚಿ ಹಾಲಸಿದ್ದ ದೇವರ ಮಾತನ್ನು ಕಟ್ಟುನಿಟ್ಟಿನಲ್ಲಿ ಪಾಲಿದ್ದರು. ಇದೀಗ ನಮ್ಮೂರಿಗೆ ಕರೊನಾ ಕಾಲಿಡದಿರಲು ಅದೇ ಕಾರಣ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಮೂಢನಂಬಿಕೆಯೇ ಇರಬಹುದು, ಆದರೆ ಜನರಿಗೆ ನೆರವಾಗಿದಂತೂ ನಿಜ. ಆದರೆ, ಎಲ್ಲ ವಿಚಾರದಲ್ಲೂ ಮೂಢನಂಬಿಕೆಗೆ ಅಂಟಿ ಕೂರುವುದು ಸರಿಯಲ್ಲ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಪ್ರೀತೀಲಿ ಮೋಸ ಹೋದ ಯುವತಿಯಿಂದ ಮಾಜಿ ಲವರ್​ಗೆ 1 ಟನ್​ ಈರುಳ್ಳಿ ಗಿಫ್ಟ್​: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?

    ಸಹೋದರನ ಶವಸಂಸ್ಕಾರಕ್ಕೆ ತೆರಳಲು ನಿಲ್ದಾಣಕ್ಕೆ ಆಗಮಿಸಿ ಬಸ್​ ಇಲ್ಲದೇ ಕಣ್ಣೀರಾಕುತ್ತಾ ಹಿಂದಿರುಗಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts