More

    ಕಿಕ್ಕಿರಿದ ಬಸ್​ನಲ್ಲಿ ಸಿಲುಕಿ ಉಸಿರುಗಟ್ಟಿ ವಿದ್ಯಾರ್ಥಿನಿಯರು ಅಸ್ವಸ್ಥ: ಸಾರಿಗೆ ಸಚಿವರ ತವರಲ್ಲೇ ಘಟನೆ!

    ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರಿನಲ್ಲೇ ವಿದ್ಯಾರ್ಥಿಗಳು ಬಸ್​ಗಾಗಿ ಪರದಾಡುವಂತಾಗಿದೆ. ಸರಿಯಾದ ಸಮಯಕ್ಕೆ ಬಸ್​ ಇಲ್ಲದೆ, ಶಾಲಾ-ಕಾಲೇಜಿಗೆ ತೆರಳಲು ಖಾನಾಪುರ ತಾಲೂಕಿನ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

    ಇಷ್ಟೇ ಅಲ್ಲದೆ, ಬಸ್ಸಿನ ಕೊರತೆಯಿಂದಾಗಿ ಸದ್ಯ ಇರುವ ಬಸ್​ನಲ್ಲಿ ವಿದ್ಯಾರ್ಥಿಗಳನ್ನು ಕುರಿ ತುಂಬಿದ ಹಾಗೇ ತುಂಬಿ ಕರೆದೊಯ್ಯುತ್ತಿದ್ದಾರೆ. ಇದರ ಪರಿಣಾಮ ಇಂದು ಕಿಕ್ಕಿರಿದ ಬಸ್​ನಲ್ಲಿ ಪ್ರಯಾಣಿಕರ ಮಧ್ಯೆ ಸಿಲುಕಿ ಉಸಿರುಗಟ್ಟಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.

    ಇದನ್ನೂ ಓದಿರಿ: ಇನ್ಮುಂದೆ ನಾನಾಯಿತು ನನ್ನ ಪಾಡಾಯಿತು…; ಜಗ್ಗೇಶ್

    ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿದ ವಿದ್ಯಾರ್ಥಿಗಳ ಪಾಲಕರು ಹಾಗೂ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಮರ್ಪಕವಾಗಿ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ. ಬೆಳಗ್ಗೆ 7-8 ಕ್ಕೆ ರಾಮನಗರ – ಖಾನಾಪೂರ ಮತ್ತು ಮಧ್ಯಾಹ್ನ 2-3 ಕ್ಕೆ ಖಾನಾಪೂರ – ರಾಮನಗರ ಬಸ್ ಬಿಡಲು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬೆಳಗಾವಿ: ವೇಶ್ಯಾವಾಟಿಕೆ ಸಂತ್ರಸ್ತೆಯರನ್ನು ಪಾಲಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಪೊಲೀಸರು!

    ಸ್ಫೋಟಕಗಳ ಜತೆ ಹುಡುಗಾಟ; ಎಚ್ಚೆತ್ತುಕೊಳ್ಳದ ಸರ್ಕಾರ, ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರಂತ..

    ಕಿದ್ವಾಯಿ-ನಿಮ್ಹಾನ್ಸ್ ಮಾದರಿ ಇನ್ನಷ್ಟು ಆಸ್ಪತ್ರೆ; ರಾಜ್ಯದಲ್ಲಿ ವಲಯವಾರು ಕೇಂದ್ರಗಳ ಆರಂಭಕ್ಕೆ ಸಿಎಂ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts